ಬಂಟ್ವಾಳ: ಪುರಸಭೆ ವ್ಯಾಪ್ತಿಯ 5 ಮಂದಿ ಸೇರಿದಂತೆ ತಾಲೂಕಿನ 18 ಮಂದಿಗೆ ಬುಧವಾರ ಕೊರೊನಾ ಸೋಂಕು ದೃಢಪಟ್ಟಿದೆ. ಪಾಣೆಮಂಗಳೂರಿನ 25 ವರ್ಷದ ಪುರುಷ, ಬಿ.ಸಿ.ರೋಡ್ ಕೈಕಂಬದ 29 ವರ್ಷದ ಮಹಿಳೆ, ಮಿತ್ತಬೈಲ್ ಬಳಿಯ 72 ವರ್ಷದ ವೃದ್ಧ, ಪಾಣೆಮಂಗಳೂರಿನ 23 ವರ್ಷದ ಮಹಿಳೆ, ಜೋಡುಮಾರ್ಗ ಬಿ.ಸಿ.ರೋಡಿನ 55 ವರ್ಷದ ಮಹಿಳೆ ಪುರಸಭಾ ವ್ಯಾಪ್ತಿಯ ಐವರು.
ಉಳಿದಂತೆ ಮಣಿನಾಲ್ಕೂರಿನ 34 ವರ್ಷದ ಪುರುಷ, ಮಣಿನಾಲ್ಕೂರಿನ 33 ವರ್ಷದ ಪುರುಷ, ಮಂಚಿಯ 19 ವರ್ಷದ ಯುವಕ, ಕುದ್ದುಪದವಿನ 58 ವರ್ಷದ ಪುರುಷ, ಸಜಿಪದ 37 ವರ್ಷದ ಯುವಕ, ಫರಂಗಿಪೇಟೆಯ 24 ವರ್ಷದ ಮಹಿಳೆ, ಶಂಭೂರಿನ 38 ವರ್ಷದ ಯುವಕ, ಕಲ್ಲಡ್ಕ ಮದಕದ 26 ವರ್ಷದ ಪುರುಷ, ಸಂಗಬೆಟ್ಟು ಸಿದ್ಧಕಟ್ಟೆಯ 55 ವರ್ಷದ ಪುರುಷ, ಕೊಳ್ನಾಡಿನ 42 ವರ್ಷದ ಪುರುಷ, ಕುಂಪಣಮಜಲಿನ 61 ವರ್ಷದ ಪುರುಷ, ವಿಟ್ಲ ಆಲಂಗಾರಿನ 61 ವರ್ಷದ ಪುರುಷ, ಬೊಳ್ಳಾಯಿಯ 47 ವರ್ಷದ ಪುರುಷ ಕೊರೊನಾ ಸೋಂಕು ದೃಢಪಟ್ಟವರು.
