ಬಂಟ್ವಾಳ: ತಾಲೂಕಿನ ಮಣಿನಾಲ್ಕೂರು ಗ್ರಾಮದ ಕೈಯಾಳ ಎಂಬಲ್ಲಿ ವಿದ್ಯುತ್ ಸಂಪರ್ಕವಿಲ್ಲದ ವಿಕಲಚೇತನೆ ಮೋಹಿನಿ ಗೋಪಾಲ ಪೂಜಾರಿ ಎಂಬವರ ಮನೆಗೆ ಸ್ಥಳೀಯ ಬಿಜೆಪಿ ಸಮಿತಿಯಿಂದ ವಿದ್ಯುತ್ ಸಂಪರ್ಕ ಕಲ್ಪಿಸಲಾಯಿತು.
ಕಡು ಬಡತನದ ಮೋಹಿನಿ ಗೋಪಾಲಪೂಜಾರಿಯವರ ಮನೆಗೆ ವಿದ್ಯುತ್ ಸಂಪರ್ಕವಿಲ್ಲದೆ ಚಿಮಿಣಿದೀಪದಲ್ಲಿ ರಾತ್ರಿಕಳೆಯುತ್ತಿದ್ದರು. ಇವರ ಮನವಿ ಮೇರೆಗೆ ಬಿ.ಜೆ.ಪಿ ಯ ಪ್ರಮುಖರಾದ ಸಾಂತಪ್ಪ ಪೂಜಾರಿ ಹಟದಡ್ಕ, ಸ್ಥಳೀಯ 95 ಬೂತ್ ಸಮಿತಿಯ ಅಧ್ಯಕ್ಷ ದೇವಾದಾಸ್ ನಾಯಕ್ ಹಾಗೂ ಕಕ್ಯಪದವು ಮೆಸ್ಕಾಂ ಶಾಖಾ ಅಧಿಕಾರಿ ನಿತಿನ್ ರವರ ಸಹಕಾರದಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ.
ಈ ಸಂದರ್ಭದಲ್ಲಿ ಭಜರಂಗದಳದ ಪ್ರಮುಖರಾದ ಸಂತೋಷ್ ಕುಲಾಲ್, ರವೀಂದ್ರ ಶೆಟ್ಟಿ ಕೈಯಾಳ,ಕ್ರಷ್ಣಪ್ಪ ಪೂಜಾರಿ, ರಾಜೇಶ್ ಕೈಯಾಳ ಪುರುಷೋತ್ತಮ ಕೈಯಾಳ, ಸುಧಾಕರ ಕೈಯಾಳ, ರೂಪೇಶ್ ಪೂಜಾರಿ ಕೊಡಂಗೆ, ದಿನೇಶ್ ಕೈಯಾಳ, ಜನರ್ದನ ಕೈಯಾಳ, ಸುನಿಲ್ ಪ್ರೀತಂ ಉಪಸ್ಥಿತರಿದ್ದರು
