ಬಂಟ್ವಾಳ: ನ್ಯಾಯಾಲಯಗಳು  ಲಾಕ್ ಡೌನ್ ನಿಂದ 11 ಗಂಟೆ ಯಿಂದ 2 ಗಂಟೆ ವರೆಗೆ ತೆರೆದಿರುವುದರಿಂದ ವಕೀಲರು ತಮ್ಮ ಕಚೇರಿಗಳಿಗೆ ತೆರಳಲು ಅವಕಾಶ ಮಾಡಿ ಕೊಡಬೇಕು ಎಂದು  ದಕ್ಷಿಣ ಕನ್ನಡ ಜಿಲ್ಲಾ ಕಾನೂನು ವೇದಿಕೆ ಮಂಗಳೂರು ಇದರ ಬಂಟ್ವಾಳ ಘಟಕದ ಸದಸ್ಯರು   ಬಂಟ್ವಾಳ ಪೊಲೀಸ್ ಉಪ ವಿಭಾಗಾಧಿಕಾರಿಯವರಿಗೆ ಶುಕ್ರವಾರ    ಮನವಿ ಸಲ್ಲಿಸಿದರು.IMG-20200717-WA0085

ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾಕಾನೂನು ವೇದಿಕೆಯ ಜಿಲ್ಲಾ ಘಟಕದ  ಉಪಾಧ್ಯಕ್ಷ ಉಮೇಶ್ ಕುಮಾರ್ ವೈ,  ಜಿಲ್ಲಾ ಸಂಘಟನಾ ಕಾರ್ಯದರ್ಶಿ ವೀರೇಂದ್ರ ಎಂ ಸಿದ್ದಕಟ್ಟೆ, ಬಂಟ್ವಾಳ ಘಟಕದ ಅಧ್ಯಕ್ಷ ಸುರೇಶ್ ಪೂಜಾರಿ, ಪ್ರಧಾನ ಕಾರ್ಯಧರ್ಶಿ ರವೀಂದ್ರ ಕುಕ್ಕಾಜೆ, ವಕೀಲರಾದ ರಾಜೇಶ್ ಬೊಳ್ಳುಕಲ್ಲು, ಅಲ್ವಿನ್ ಮೊಂತೇರೊ ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *