ಬಂಟ್ವಾಳ:  ಬಿ.ಸಿ.ರೋಡಿನ ಕಾಮಾಜೆಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅನುಭವಿ ಉಪನ್ಯಾಸಕರ ತಂಡದೊಂದಿಗೆ ವಿದ್ಯಾರ್ಥಿಗಳ ಸ್ವಾಗತಕ್ಕೆ ಸಜ್ಜಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಇಲ್ಲಿ ಅತಿ ಕಡಿಮೆ ಶುಲ್ಕದಲ್ಲಿ ಬಿಎ, ಬಿಕಾಂ ಪದವಿಗಳಿಗೆ ಪ್ರವೇಶ ಪಡೆಯಬಹುದು. ಹುಡುಗಿಯರಿಗೆ ಶುಲ್ಕ ಮರುಪಾವತಿ ವ್ಯವಸ್ಥೆಯಿದೆ. ವಿದ್ಯಾರ್ಥಿಗಳ ಬಗ್ಗೆ ವೈಯಕ್ತಿಕ ಗಮನ, ಸ್ಪೋಕನ್ ಇಂಗ್ಲಿಷ್, ಟೈಲರಿಂಗ್, ಬ್ಯೂಟಿಶಿಯನ್ ಇತ್ಯಾದಿ ವಿವಿಧ ಉಚಿತ ತರಬೇತಿಗಳು, ವೃತ್ತಿ ಮಾರ್ಗದರ್ಶನ, ರಾಷ್ಟ್ರೀಯ ಸೇವಾ ಯೋಜನೆ ಇತ್ಯಾದಿ ಪಠ್ಯಪೂರಕ ಚಟುವಟಿಕೆಗಳ ಮೂಲಕ ವ್ಯಕ್ತಿತ್ವ ವಿಕಸನಕ್ಕೆ ಅವಕಾಶ ಇಲ್ಲಿದೆ ಎಂದು ಹೇಳಿದೆ. ಶ್ರದ್ಧೆ ಹಾಗೂ ವೃತ್ತಿಬದ್ಧತೆಯುಳ್ಳ ಅರ್ಪಣಾ ಮನೋಭಾವದ ಬೋಧಕರು ಇಲ್ಲಿದ್ದಾರೆ, ಬಿಸಿರೋಡು ಬಸ್ ಸ್ಟ್ಯಾಂಡಿನಿಂದ ಕೆ.ಎಸ್.ಆರ್.ಟಿ.ಸಿ. ಬಸ್ ವ್ಯವಸ್ಥೆಯಿದೆ.  ಪಿಯುಸಿ ಉತ್ತೀರ್ಣರಾದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು ಎಂದು ಪ್ರಿನ್ಸಿಪಾಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

By Suddi9

Leave a Reply

Your email address will not be published. Required fields are marked *