ಬಂಟ್ವಾಳ: ಬಂಟ್ವಾಳ ತಾಲೂಕಿನಲ್ಲಿ ಕೊರೋನ ಸೋಂಕು ಪ್ರಕರಣ ಹೆಚ್ಚುತ್ತಲೇ ಇದ್ದು, ಭಾನುವಾರವು 16 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಬಂಟ್ವಾಳ ತಾಲೂಕಿನ ಕೇಂದ್ರಸ್ಥಾನ ಬಿ.ಸಿ.ರೋಡಿನಲ್ಲಿ 4 ಪ್ರಕರಣಗಳು ಇದ್ದು, ಉಳಿದಂತೆ ತಾಲೂಕಿನ ನಾನಾ ಭಾಗಗಳಲ್ಲಿ ವಾಸಿಸುವವರು ಸೋಂಕಿತರಾಗಿದ್ದಾರೆ.

ವಿವರಗಳು ಹೀಗಿವೆ.

28 ವರ್ಷದ ಯುವಕ ಬಂಟ್ವಾಳ, 19 ವರ್ಷದ ಯುವತಿ ನಂದಾವರ, 18 ವರ್ಷದ ಯುವಕ ಫರಂಗಿಪೇಟೆ, 37 ವರ್ಷದ ಮಹಿಳೆ ಅರ್ಕುಳ, 29  ವರ್ಷದ ಯುವಕ ಲೊರೆಟ್ಟೊಪದವು, 38 ವರ್ಷದ ಮಹಿಳೆ ಬೆಂಜನಪದವು, 25 ವರ್ಷದ ಯುವಕ ನೆಟ್ಲಮುಡ್ನೂರು, 26 ವರ್ಷದ ಯುವಕ ಬಿ.ಸಿ.ರೋಡ್, 20 ವರ್ಷದ ಮಹಿಳೆ ಪೆರ್ನೆ, 22 ವರ್ಷದ ಮಹಿಳೆ  ಗೋಳ್ತಮಜಲು, 30 ವರ್ಷದ ಮಹಿಳೆ ಬುಡೋಳಿ, 32 ವರ್ಷದ ಮಹಿಳೆ ಬಿ.ಸಿ.ರೋಡ್, 56 ವರ್ಷದ ಪುರುಷ ಕರ್ಪೆ, 70 ವರ್ಷದ ವೃದ್ಧ ಗೂಡಿನಬಳಿ, ಬಿ.ಸಿ.ರೋಡ್, 26 ವರ್ಷದ ಪುರುಷ ನಂದಾವರ, 43 ವರ್ಷದ ಮಹಿಳೆ ಬಿ.ಸಿ.ರೋಡ್ಎಂದು ತಿಳಿದು ಬಂದಿದೆ.

By suddi9

Leave a Reply

Your email address will not be published. Required fields are marked *