ಬಂಟ್ವಾಳ: ಇಲ್ಲಿನ ಪ್ರಭಾವಿ ರಾಜಕಾರಣಿಗಳಿಗೆ ಕೊರೋನ ಸೋಂಕು ತಗಲಿದೆ. ಕೇಂದ್ರದ ಮಾಜಿ ಸಚಿವರು,ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರ ಸಹಿತ ನಾಲ್ವರಲ್ಲಿ ಕೊರೊನಾ ಸೋಂಕು ತಗುಲಿರುವುದು ಖಚಿತವಾಗಿದೆ.ಬಂಟ್ವಾಳದ ಬಸ್ತಿಪಡ್ಪುವಿನಲ್ಲಿ ನಿವಾಸವಿದಲ್ಲಿ ವಾಸವಿರುವ ಮಾಜಿ ಕೇಂದ್ರ ಸಚಿವರು, ಇವರ ಸೊಸೆ,ಅತ್ತೆ ಅವರಿಗೂ ಪಾಸಿಟಿವ್ ಕಂಡು ಬಂದಿದೆ. ಮಾಜಿ ಕೇಂದ್ರ ಸಚಿವರ ಪತ್ನಿಗೆ ಶನಿವಾರವೇ ಸೋಂಕು ದೃಢ ಪಟ್ಟಿತ್ತು.ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಇದೀಗ ಮಾಜಿ ಕೇಂದ್ರ ಸೋಂಕು ತಗಲಿದ ಹಿನ್ನೆಲೆಯಲ್ಲಿ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಯಾವುದೇ ಸೋಂಕು ಲಕ್ಷಣ ಇಲ್ಲದಿದ್ದರೂ ಪಾಸಿಟಿವ್ ಎಂದು ಬಂದಿದೆ. ಸದ್ಯ ಅವರು ಕ್ಷೇಮವಾಗಿದ್ದು ಯಾರು ಆತಂಕ ಪಡಬೇಕಾಗಿಲ್ಲ ಎಂದು ಅವರ ಪುತ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹಾಗೆಯೇ ಬಂಟ್ವಾಳ ಕಾಲೇಜ್ ರಸ್ತೆಯ ನಿವಾಸಿ,ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಿಗೂ ಸೋಂಕು ದೃಢಪಟ್ಟಿದೆ.ಜ್ವರ ಬಂದ ಹಿನ್ನಲೆಯಲ್ಲಿಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.
ಅಲ್ಲಿ ಅವರ ಗಂಟಲದ್ರವ ಪರೀಕ್ಷೆಗೊಳಪಡಿಸಿದಾಗ ಕೊರೋನಾ ಪಾಸಿಟಿವ್ ಪತ್ತೆಯಾಗಿದೆ.ಸದ್ಯ ಇವರು ಕೂಡ ಕ್ಷೇಮವಾಗಿದ್ದಾರೆ ಎಂದು ತಿಳಿದುಬಂದಿದೆ. ಈ ಹಿನ್ನಲೆಯಲ್ಲಿ ಈ ಇಬ್ಬರು ರಾಜಕೀಯ ಮುಖಂಡರ ಮನೆಯನ್ನು ಸೀಲ್ ಡೌನ್ ಮಾಡಲಾಗಿದೆ. ಮಿನಿವಿಧಾನಸೌಧದಲ್ಲಿ ತಿರುಗಾಟಕ್ಕೆ ನಿರ್ಬಂಧ: ಬಿ.ಸಿ.ರೋಡಿನಲ್ಲಿರುವ ಮಿನಿವಿಧಾನಸೌಧದೊಳಗೆ ಸಾರ್ವಜನಿಕರ ಅನಗತ್ಯ ತಿರುಗಾಟಕ್ಕೆ ನಿರ್ಬಂಧ ಹೇರಲಾಗಿದೆ.
ಅಗತ್ಯ ಕೆಲಸವಿರುವವರು ಮಿನಿವಿಧಾನಸೌಧದಲ್ಲಿ ತಮ್ಮ ಹೆಸರು ದಾಖಲಿಸಿ,ಥರ್ಮಲ್ ಸ್ಕ್ಯಾನ್ ಮಾಡಿದ ಬಳಿಕ ಸಂಬಂಧಿಸಿದ ವಿಭಾಗಕ್ಕೆ ತೆರಳಿ ತಮ್ಮ ಕೆಲಸ ಮಾಡಿಸಿಕೊಳ್ಳಲಷ್ಠೆ ಅವಕಾಶವಿದ್ದು,ಅನಗತ್ಯ ತಿರಗಾಡುವುದನ್ನು ನಿರ್ಬಂಧಿಸಲಾಗಿದೆ.ಮಿನಿವಿಧಾನಸೌಧದೊ
