ಬಂಟ್ವಾಳ:ಇಲ್ಲಿಗೆ ಸಮೀಪದ ಬಸ್ತಿಪಡ್ಪುವಿನ ಮಹಿಳೆಯೋರ್ವರಿಗೆ ಶನಿವಾರ ಕೊರೋನ ಸೋಂಕು ದೃಢಪಟ್ಟಿದ್ದು, ಜ್ವರ ಬಂದ ಹಿನ್ನಲೆಯಲ್ಲಿ ಪರೀಕ್ಷೆಗೊಳಪಡಿಸಿದಾಗ ಕೊರೋನ ಪಾಸಿಟವ್ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.ಇವರ ಸಂಪರ್ಕದಲ್ಲಿರುವವರನ್ನು ಕ್ವಾರಂಟೈನ್ ಮಾಡುವ ಸಾಧ್ಯತೆ ಇದೆ.

8 ಪ್ರಕರಣ:

ಕೊರೊನಾಕ್ಕೆ ಸಂಬಂಧಿಸಿ ಕ್ವಾರಂಟೈನ್ ಉಲ್ಲಂಘನೆ ಮಾಡಿರುವ ಆರೋಪದಲ್ಲಿ ಬಂಟ್ವಾಳ ತಾಲೂಕಿನ ವಿವಿಧ ಠಾಣೆಗಳಲ್ಲಿ ಶುಕ್ರವಾರ ಒಟ್ಟು 8 ಪ್ರಕರಣ ದಾಖಲಾಗಿದೆ. ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ 5, ಪುಂಜಾಲಕಟ್ಟೆ ಠಾಣೆ 1, ಬಂಟ್ವಾಳ ನಗರ ಹಾಗೂ ವಿಟ್ಲ ಠಾಣೆಯಲ್ಲಿ ತಲಾ ಒಂದೊಂದು ಪ್ರಕರಣ ದಾಖಲಾಗಿದೆ. ಕ್ವಾರಂಟೈನ್ ನಲ್ಲಿದ್ದು, ಹೊರಗಡೆ ತಿರುಗಾಟ ನಡೆಸುತ್ತಿರುವವರ ವಿರುದ್ಧ ಪ್ರಕರಣ ದಾಖಲಿಸುವಂತೆ ಜಿಲ್ಲಾಡಳಿತ ಪೊಲೀಸ್ ಇಲಾಖೆಗೆ ನಿರ್ದೇಶನ ನೀಡಿತ್ತು. ಕೋವಿಡ್ ಪ್ರಕರಣಗಳ ಸಂಖ್ಯೆ ಪ್ರತಿದಿನವೂ ಜಾಸ್ತಿಯಾಗುತ್ತಿದ್ದು, ಕೆಲವು ಸಾವುಗಳೂ ಸಂಭವಿಸಿವೆ.

ಕೊರೊನಾ ಸೋಂಕಿತರ ಸಂಪರ್ಕಕ್ಕೆ ಬಂದವರು, ಹೊರರಾಜ್ಯಗಳಿಂದ ಬಂದವರು, ವಿದೇಶಗಳಿಂದ ಬಂದವರಿಗೆ ನಿರ್ದಿಷ್ಟ ದಿನಗಳವರೆಗೆ ಕ್ವಾರಂಟೈನ್ ವಿಧಿಸಿ ಸೂಕ್ತ ವಸತಿ ವ್ಯವಸ್ಥೆಯನ್ನೂ ಮಾಡಲಾಗಿದೆ. ಇದನ್ನು ಉಲ್ಲಂಘಿಸಿ ಹೊರಗಡೆ ಮನಸೋ ಇಚ್ಛೆ ತಿರುಗಾಡುವವರ ವಿರುದ್ಧ ಈಗ ಪ್ರಕರಣ ದಾಖಲಾಗಿದೆ.

ಸ್ವಯಂಪ್ರೇರಿತ ಬಂದ್ ಗೆ ನಿರ್ಧಾರ:    

ಮಹಾಮಾರಿ ಕೊರೋನಾ ದಿನದಿಂದ ದಿನಕ್ಕೆ ವ್ಯಾಪಕವಾಗುತ್ತಿರುವ ಕಾರಣ ಬಿ.ಸಿ.ರೋಡಿಗೆ ಸಮೀಪದ ಕೈಕಂಬ ಪರಿಸರದ ವ್ಯಾಪರಸ್ಥಾರೆಲ್ಲರೂ  ಸೋಮವಾರದಿಂದ ಸ್ವಯಂಪ್ರೇರಿತವಾಗಿ ಮಧ್ಯಾಹ್ನ 12 ಗಂಟೆಯ ಬಳಿಕ ವ್ಯಾಪಾರ,ವಹಿವಾಟು ಸ್ಥಗಿತಗೊಳಿಸಲು  ನಿರ್ಧರಿಸಿದ್ದು, ಸಾರ್ವಜನಿಕರು ಕೂಡ ಸಹಕರಿಸುವಂತೆ ವ್ಯಾಪಾರಸ್ಥರು ಕೋರಿದ್ದಾರೆ.

By suddi9

Leave a Reply

Your email address will not be published. Required fields are marked *