ಬಡಗಬೆಳ್ಳೂರು: ಬಂಟ್ವಾಳ ತಾಲೂಕು ಬಡಗಬೆಳ್ಳೂರು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದಲ್ಲಿ ಕೆಎಂಎಫ್ ಸಹಕಾರದಲ್ಲಿ ಹೈನುಗಾರರಿಗೆ ಅನುಕೂಲಕರವಾದ ಮೈ ಎಪಿಸಿಎಸ್ ಎಂಬ ಮೊಬೈಲ್ ಆ್ಯಪ್ ಬಿಡುಗಡೆ ಕಾರ್ಯಕ್ರಮ ಸೋಮವಾರ ನಡೆಯಿತು.

ಕೆ . ಎಂ .ಎಫ್ ನಿರ್ಧೇಶಕಿ ಬಡಗಬೆಳ್ಳೂರು ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ಸವಿತಾ ಎನ್ ಶೆಟ್ಟಿ ಆ್ಯಪ್ ಬಿಡುಗಡೆಗೊಳಿಸಿ ಇಂತಹ ಡಿಜಿಟಲೀಕರಣದ ಮೂಲಕ ಆಧುನಿಕ ಸೌಲಭ್ಯ ಬಳಸಿ ಸ್ಪರ್ಧಿಸಲು ಸಹಕಾರಿಯಾಗಿದೆ. ಸ್ವದೇಶೀ ಜಾಗೃತಿಯ ಸಂದರ್ಭದಲ್ಲಿ ಯುವಕರು ಆ್ಯಪ್ ತಯಾರಿಸಿರುವುದು ಅಭಿನಂದಾರ್ಹ ಎಂದ ಅವರು ಆ್ಯಪ್ ತಯಾರಿಸಿದ ಭಟ್ ಇಂಡಿಯಾ ಸಂಸ್ಥೆಯ ಶ್ರೀನಿಧಿ ಕಲ್ಲಡ್ಕ ಅವರನ್ನು ಅಭಿನಂದಿಸಿದರು. ಶ್ರೀ ನಿಧಿ ಅವರು ಆ್ಯಪ್ ಬಳಕೆಯ ಪ್ರಯೋಜನಗಳ ಬಗ್ಗೆ ಮಾಹಿತಿ ನೀಡಿದರು.
ಈ ಸಂಧರ್ಭದಲ್ಲಿ ಕೆ.ಎಂ.ಎಫ್ ಡಿ.ಎಂ ಪ್ರಭಾಕರ್, ವಿಸ್ತರಣಾಧಿಕಾರಿ ಸರೋಜಿನಿ ,ಸಂಘದ ನಿರ್ಧೇಶಕರು ಹಾಗೂ ಸದಸ್ಯರು ಉಪಸ್ಥಿತರಿದ್ದರು.

