ಮುಂಬಯಿ: ಉಪನಗರದ ಅಂಧೇರಿ ಪೂರ್ವದ ಚಕಲಾ ಸಿಗರೇಟ್ ಫ್ಯಾಕ್ಟರಿ ಸನಿಹದ ಚಕಲಾ ತರುಣ್ ಭಾರತ್ ಕಾಲೋನಿ ಇಲ್ಲಿನ ಸ್ನೇಹಲ್ ಅಪಾರ್ಟ್‍ಮೆಂಟ್ ನಿವಾಸಿ ಗಿಲ್ಬರ್ಟ್
ರೋಡ್ರಿಗಸ್ (53.) ಅಲ್ಪಕಾಲದ ಅನಾರೋಗ್ಯದಿಂದ ಇಂದಿಲ್ಲಿ ಮಂಗಳವಾರ ರಾತ್ರಿ ಕಾಂದಿವಿಲಿ ಪಶ್ಚಿಮದ ಆಸ್ಕರ್ ಮಲ್ಟಿ ಸ್ಪೆಷಿಯಾಲಿಟಿ ಆಸ್ಪತ್ರೆಯಲ್ಲಿ ನಿಧನರಾದರು.

Gilbert Rodrigues Chakala (B)
ಉಡುಪಿ ಜಿಲ್ಲೆಯ ಹೇರೂರು ಸಾಸ್ತಾನ ಮೂಲತಃ ಗಿಲ್ಬರ್ಟ್ ಕಳೆದ ಅನೇಕ ವರ್ಷಗಳಿಂದ ಅದಾನಿ (ಹಳೆ ರಿಲಾಯನ್ಸ್) ಇಲೆಕ್ಟ್ರಿಸಿಟಿ ಮುಂಬಯಿ ಲಿಮಿಟೆಡ್ ಸಂಸ್ಥೆಯಲ್ಲಿ ನೌಕರಿಯಲ್ಲಿದ್ದರು.

ಪತ್ನಿ ಜೋಸ್ಫಿನ್ (ಸಿಕ್ವೇರಾ) ಜಿ.ರೋಡ್ರಿಗಸ್ (ಪಚ್ಚಿನಡ್ಕ ಮೊಡಂಕಾಪು ಬಂಟ್ವಾಳ), ಸುಪುತ್ರಿ ಕು| ಜನಿಶಾ ರೋಡ್ರಿಗಸ್, ಸುಪುತ್ರ ಮಾ| ಗಾವಿನ್ ರೋಡ್ರಿಗಸ್ ಸೇರಿದಂತೆ ಬಂಧು ಬಳಗವನ್ನು ಆಗಲಿದ್ದಾರೆ.

ಮೃತರ ಅಂತ್ಯಕ್ರಿಯೆ ಬುಧವಾರ ಓಶಿವಾರದಲ್ಲಿ ಸೆಮೆಟರಿಯಲ್ಲಿ ನೆರವೇರಿಸಲಾಗುವುದುಎಂದು ಕುಟುಂಬ ಮೂಲಗಳು  ಮಾಧ್ಯಮಕ್ಕೆ ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *