ಬಡಗಬೆಳ್ಳೂರು:ಬಂಟ್ವಾಳ ತಾಲೂಕಿನ ಬಡಗಬೆಳ್ಳೂರು ಗ್ರಾಮದ ರ್ದಖಾಸ್ ಅಬ್ಬುಂಞ್ಞ ಬ್ಯಾರಿ (91) ಅಲ್ಪ ಕಾಲದ ಅಸೌಖ್ಯದಿಂದ ಅವರ ಸ್ವಹಗ್ರಹದಲ್ಲಿ ಸೋಮವಾರ ನಿಧನಹೊಂದಿದರು. ಮೃತರು ಒಂದು ಗಂಡು ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.
ಅಬ್ಬುಂಞ್ಞ ಬ್ಯಾರಿಯವರು ಬಡಗಬೆಳ್ಳೂರಿನ ಗ್ರಾಮ ಪಂಚಾಯತಿ ಸದಸ್ಯರಾಗಿ ಸೇವೆಸಲ್ಲಿಸಿದ್ದರು. ಅಲ್ಲದೇ ಹಲಾವಾರು ಸಂಘ ಸಂಸ್ಥೆಗಳಲ್ಲಿ ಸಕ್ರೀಯವಾಗಿದ್ದು ಎಲ್ಲರ ಅಚ್ಚುಮೆಚ್ಚಿನ ಅಬ್ಬುಂಞಕಾಕ ಆಗಿದ್ದರು ಕಾಂಗ್ರೇಶ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿದ್ದರು.
ಸಂತಾಪ ಸೂಚನೆ:
ಮೃತರ ಅತ್ಮಕ್ಕೆ ಚಿರಶಾಂತಿ ಕೋರಿ ಮಾಜಿ ಸಚಿವ ರಮಾನಾಥ ರೈ, ಜಿ.ಪಂ.ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಉಧ್ಯಮಿ ರಘು ಎಲ್ ಶೆಟ್ಟಿ , ಕಿಶೋರು ಭಂಡಾರಿ, ವಸಂತ ಅಂಚನ್ ಮುಂತಾದ ಹಲಾವಾರು ಗಣ್ಯರು ಸಂತಾಪ ಸೂಚಿಸಿದ್ದಾರೆ.
