ಬಂಟ್ಪಾಳ: ಪಾಣೆಮಂಗಳೂರು ನರಿಕೊಂಬು ಗ್ರಾಮದ ಮರ್ದೊಳಿ ಎಂಬಲ್ಲಿ ಹಲವಾರು ವರ್ಷಗಳಿಂದ ಆರಾಧಿಸಿಕೊಂಡು ಬರುತ್ತಿದ್ದ ಸ್ವಾಮಿ ಕೊರಗಜ್ಜ ದೈವದ ಕಟ್ಟೆಯು ಶಿಥಿಲಾವಸ್ಥೆಯಲ್ಲಿದ್ದು ಅದನ್ನು ಜೀರ್ಣೋದ್ಧಾರಗೊಂಡಿದೆ.
ಸಮಿತಿಯ ರಚನೆ ಮಡಿ ದಾನಿಗಳ ಸಹಕಾರದಿಂದ ನೂತನ ಗುಡಿಯನ್ನು ನಿರ್ಮಿಸಿ ಫರಂಗಿಪೇಟೆಯ ಶಿಲ್ಪಿ ಲೋಕನಾಥ ಆಚಾರ್ಯ ಇವರಿಂದ ನಿರ್ಮಿಸಲ್ಪಟ್ಟ ಸ್ವಾಮಿ ಕೊರಗಜ್ಜ ದೈವದ ಶಿಲಾಮೂರ್ತಿಯನ್ನು ವೈಧಿಕರಾದ ರಥಬೀದಿಯ ಶ್ರೀ ಕಾಳಿಕಾಂಬ ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀ ಯಾಧವ ಶರ್ಮ ಪೌರೋಹಿತ್ಯದೊಂದಿಗೆ ವಿಧಿವಿಧಾನಗಳನ್ನು ನೇರವೆರಿಸಿ ಜೂನ್ 12ನೇ ಶುಕ್ರವಾರದಂದು ಮಧ್ಯಾಹ್ನ ಗಂಟೆ 12.22 ರ ಸುಮೂರ್ತದಲ್ಲಿ ಪ್ರತಿಷ್ಠಾಪಿಸಲಾಯಿತು.
ಕೋರೊನದ ಹಿನ್ನೆಲೆಯಲ್ಲಿ ಕೊರಗಜ್ಜ ದೈವಕ್ಕೆ ದೃಢಕಲಶಾಭಿಷೇಕ ಮಾಡಲು ಸೀಮಿತ ಭಕ್ತಾಧಿಗಳಿಗೆ ಅವಕಾಶವಿದ್ದು, ಭಕ್ತರು ಅಭಿಷೇಕ ಮಾಡಿ ಪ್ರಸಾದ ಸ್ವೀಕರಿಸಿಪುನೀತರಾದರು, ಸ್ವಾಮಿ ಕೊರಗಜ್ಜ ದೈವದ ಗುಡಿಯ ಯಜಮಾನ ಶ್ರೀ ಲಿಂಗಪ್ಪ ಮೂಲ್ಯ ಹಾಗೂ ಜೀರ್ಣೋದ್ಧಾರ ಸಮಿತಿಯ ರುವಾರಿಗಳಾದ ಶ್ರೀ ಗಣೇಶ್ ಮರ್ದೋಳಿ, ಶ್ರೀ ಹರೀಶ್ ಮರ್ದೋಳಿ, ಶ್ರೀ ವೇಣುಗೋಪಾಲ್ ಮರ್ದೋಳಿ, ಶ್ರೀ ಅಶೋಕ್ ಮರ್ದೋಳಿ ಇನ್ನಿತರು ಉಪಸ್ಥಿತರಿದ್ದರು.
