ಬಂಟ್ವಾಳ  :  ಹಲವು ಸಮಯದಿಂದ ಬಿ.ಸಿ.ರೋಡಿನ ತಂಗುದಾಣದಲ್ಲಿ ಬೀಡುಬಿಟ್ಟಿದ್ದ ಮೈಸೂರು ಮೂಲದ ವೃದ್ದ ದಂಪತಿ ಕೊನೆಗೆ  ಊರಿಗೆ ತೆರಳಿದ್ದಾರೆ. ಬಂಟ್ವಾಳ   ಹ್ಯುಮಾನಿಟಿ ಕ್ಲಬ್ ಸಂಘಟಕ,ಸಾಮಾಜಿಕ ಕಾರ್ಯಕರ್ತ ರಾಜ ಚಂಡ್ತಿಮಾರ್ ಅವರು ಈ ವೃದ್ಧ ದಂಪತಿಯನ್ನು ಮನವೊಲಿಸಿ ಬಂಟ್ವಾಳ ನಗರ ಪೊಲೀಸರ ಸಹಕಾರದಿಂದ  ಸರಕಾರಿ ಬಸ್ ನಲ್ಲಿ ಊರಿಗೆ ಕಳುಹಿಸಿ ಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಸುಮಾರು ಐದು ವರ್ಷದ ಹಿಂದೆ  ಈ ವೃದ್ದ ದಂಪತಿ ನಾಹರಾಜ ಮತ್ತು ಶಾಂತಮ್ಮ ಅವರು ಫರಂಗಿಪೇಟೆಗೆ ಬಂದು ಇಲ್ಲಿ ಹೊಟೇಲ್ ವೊಂದರಲ್ಲಿ ಕೆಲಸಕ್ಕಿದ್ದರು‌.

IMG-20200622-WA0026ಸ್ವಲ್ಪ ಸಮಯದ ಬಳಿಕ ಹೊಟೇಲ್ ನಲ್ಲಿ ಕೆಲಸಬಿಟ್ಟು ಬಿ.ಸಿ.ರೋಡಿಗೆ ಬಂದು ಬಿಕ್ಷೆ ಬೇಡುತ್ತಿದ್ದರು. ಬಸ್ ತಂಗುದಾಣದಲ್ಲಿ ಬೀಡುಬಿಟ್ಟಿದ್ದರು. ಸಾರ್ವಜನಿಕರ ದೂರಿನ ಮೇರೆಗೆ ಬಂಟ್ವಾಳ ಪುರಸಭೆ ಇವರನ್ನು ವಾಮಂಜೂರಿನ ವೃದ್ದಾಶ್ರಮದಲ್ಲಿ ಸೇರಿಸಿತ್ತು.ಅಲ್ಲಿ ಜಗಳವಾಡಿ ಮತ್ತೆ ವಾಪಾಸ್ ಬಂದು ಆದೇ ತಂಗುದಾಣದಲ್ಲಿ ಬೀಡುಬಿಟ್ಟರು.ಮತ್ತೆ  ಸಾರ್ವಜನಿಕರ ದೂರಿನನ್ವಯ ಇವರನ್ನು ಎಬ್ಬಿಸಿದ ಪುರಸಭೆ ಬಂಟ್ವಾಳ ಬಡ್ಡಕಟ್ಟೆಯಲ್ಲಿರುವ ವಾಜಪೇಯಿ ವಾಣಿಜ್ಯಸಂಕಿರ್ಣದ ಖಾಲಿ ಕೊಠಡಿಯೊಂದರಲ್ಲಿ ಉಳಕೊಳ್ಳಲು ವ್ಯವಸ್ಥೆ ಮಾಡಲಾಗಿತ್ತು.

IMG-20200622-WA0027ವೃದ್ದನಿಗೆ ಮದ್ಯ ಸೇವನೆಯ ಚಟ ಇದ್ದು,ಇಲ್ಲಿ ಅಮಲು ಪದಾರ್ಥಸೇವಿಸಿ ಬಂದು ಜಗಳವಾಡುತ್ತಿದ್ದ ಇದರಿಂದ ಅಕ್ಕಪಕ್ಕದ ಅಂಗಡಿಯವರಿಗೆ ಕಿರಿಕಿರಿ ಉಂಟಾಗುತ್ತಿತ್ತು. ಸ್ವಲ್ಪ ಸಮಯದ ಬಳಿಕ ಈ ಕೊಠಡಿಯನ್ನು ಖಾಲಿ ಮಾಡಿದ ಈ ದಂಪತಿ ಮತ್ತದೇ ಬಸ್ ತಂಗುದಾಣಕ್ಕೆ   ಶಿಫ್ಟ್ ಆದರು.ಈ ಹಂತದಲ್ಲಿ ವೃದ್ದೆಯ ಕಣ್ಣು ಚಿಕಿತ್ಸೆಯನ್ನು ಪುರಸಭೆಯ ವತಿಯಿಂದ ಮಾಡಿಸಲಾಗಿತ್ತು.   ಇತ್ತೀಚೆಗೆ ಕೊರೋನಾ ಸೋಂಕಿನ ಹಿನ್ನಲೆಯಲ್ಲಿ ಇಡೀ ಊರು ಲಾಕ್ ಡೌನ್ ಆದಗಲೂ ಇವರು ಮಾತ್ರ ಬಸ್ ತಂಗುದಾಣ ಬಿಟ್ಟು ಕದಲಲಿಲ್ಲ,ಪುರಸಭೆಯ ಮುಖ್ಯಾಧಿಕಾರಿ ಲೀನಾಬ್ರಿಟ್ಟೋ,ಪರಿಸರ ವಿಭಾಗದ ಸಹಾಯಕ ಇಕ್ಬಾಲ್ ಸಹಿತ ಹಲವು ಮಂದಿ ಊರಿಗೆ ಕಳುಹಿಸಿಕೊಡುವ ನಿಟ್ಟಿನಲ್ಲಿ ಸತತ ಪ್ರಯತ್ನಪಟ್ಟರೂ,ಈ ವೃದ್ದ ದಂಪತಿ ನಾಗರಾಜ,ಶಾಂತಮ್ಮ ಬಿ.ಸಿ.ರೋಡ್ ಬಿಟ್ಟು ತೆರಳಲು ಒಪ್ಪಲಿಲ್ಲ.ಲಾಕ್ ಡೌನ್ ಸಂದರ್ಭ ಪುರಸಭೆಯ ವತಿಯಿಂದ ಇವರಿಗೆ ಪ್ರತಿದಿನ ಬಂಟವಾಳ ಶ್ರೀ ತಿರುಮಲ ವೆಂಕಟರಮಣ ದೇವಳದ ನೈವೇದ್ಯದ ಅನ್ನಪ್ರಸಾದವನ್ನು ವಿತರಿಸಲಾಗಿತಿತ್ತು.ಇತರ ಸಂಘಟನೆಯ ಕಾರ್ಯಕರ್ತರು ಪ್ರತಿದಿನ ತಿಂಡಿತಿನಸುಗಳನ್ನು ಪೂರೈಸುತ್ತಿದ್ದರು.ಈ ಬಸ್ ತಂಗುದಾಣ ಬಿಟ್ಟು ಇವರು ಕದಲುತ್ತಿರಲಿಲ್ಲ,ಅಲ್ಲೇ ಪರ್ಮನೆಂಟ್  ವಾಸ್ತವ್ಯ,ಇಲ್ಲಿ ಬಾಡಿಗೆಯ ರಿಕ್ಷಾ ನಿಲುಗಡೆಯಾಗುವುದರಿಂದ ತಂಗುದಾಣಕ್ಕೆ ಬರುವ ಪ್ರಯಾಣಿಕರು ಚಿಲ್ಲರೆ ಹಣವನ್ನು ಈ ದಂಪತಿಗೆ ಭಿಕ್ಷೆ ನೀಡುತ್ತಿದ್ದರು.ಮೈಸೂರಿನ ರಾಮನಗರ ನಿವಾಸಿಗಳಾಗಿರುವ ಈ ದಂಪತಿ ಶನಿವಾರ ರಾತ್ರಿ ಮೈಸೂರು ಬಸ್ ಹತ್ತಿ ಊರಿಗೆ ತೆರಳಿದ್ದಾರೆ.ಆದರೆ ಕೆಲ ಸಮಯದಲ್ಲಿ ಮತ್ತೆ ಬಿ.ಸಿ.ರೋಡ್ ಗೆ ಬರುವುದು ನಿಶ್ಚಿತ ಎಂದು ಅವರನ್ನು ಪ್ರತಿನಿತ್ಯ ಗಮನಿಸಿದವರು ಹೇಳುತ್ತಾರೆ.

 

By suddi9

Leave a Reply

Your email address will not be published. Required fields are marked *