ಬಂಟ್ವಾಳ: ವಾಮದಪದವು ಯೋಗ ತರಬೇತಿ ಕೇಂದ್ರದ ವತಿಯಿಂದ ವಾಮದಪದವು ಶ್ರೀ ಗಣೇಶ ಮಂಟಪದಲ್ಲಿ ರವಿವಾರ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಲಾಯಿತು.
ಯೋಗ ಗುರು ಗಣೇಶ ಪ್ರಭು ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.ಬಳಿಕ ಅವರು ಯೋಗಾಸನ ನಡೆಸಿಕೊಟ್ಟರು. ತರಬೇತಿ ಕೇಂದ್ರದ ಸದಾನಂದ ಶೆಟ್ಟಿ, ಅನಂತ ಪೈ, ಜಯಾನಂದ ಚೌಟ ಮತ್ತಿತರರು ಭಾಗವಹಿಸಿದ್ದರು.
