ಕೈಕಂಬ: ಸಿದ್ದಕಟ್ಟೆಯ ವ್ಯಕ್ತಿಯೋರ್ವರ ಮೃತದೇಹ ಬಜಪೆ ಪೋಲೀಸ್ ಠಾಣಾ ವ್ಯಾಪ್ತಿಯ ಗುರುಪುರ ಫಲ್ಗುಣಿ ನದಿಯಲ್ಲಿ ಶುಕ್ರವಾರ ಪತ್ತೆಯಾಗಿದೆ. ಮೃತರನ್ನು ನಾಗೇಶ್ ಆಚಾರ್ಯ(58)ಎಂದು ಗುರುತಿಸಲಾಗಿದೆ. ಕಳೆದ ಎರಡು ದಿನಗಳ ಹಿಂದೆ ನಾಗೇಶ್ ಅವರು ಎಡಪದವಿನಲ್ಲಿರುವ ಮರದ ಮಿಲ್ಲಿ ಗೆ ಕೆಲಸ ಕೇಳಿಕೊಂಡು ಬಂದಿದ್ದು, ಮಿಲ್ಲಿನ ಮಾಲೀಕರು ಕೆಲಸಕ್ಕೆ ಬರುವಂತೆ ಹೇಳಿದ್ದರು.

IMG-20200612-WA0035ನಾಗೇಶ್ ತಮ್ಮ ಕೆಲಸದ ಸಲಕರಣೆಗಳನ್ನು ತೆಗೆದುಕೊಂಡು ನಾಳೆ ಕೆಲಸಕ್ಕೆ ಬರುವುದಾಗಿ ತೆರಳಿದ್ದರು. ಈ ಮದ್ಯೆ ಅವರ ಮೃತದೇಹ ಶುಕ್ರವಾರ ಗುರುಪುರ ನದಿಯಲ್ಲಿ ಪತ್ತೆಯಾಗಿದ್ದು, ಆಕಸ್ಮಿಕವಾಗಿ ನದಿಗೆ ಜಾರಿಬಿದ್ದರೆ ಅಥವಾ ಆತ್ಮಹತ್ಯೆ ಗೈದಿದ್ದಾರೆಯೇ ಎಂದು ಸ್ಪಷ್ಟವಾಗಿ ತಿಳಿದುಬಂದಿಲ್ಲ. ಪೋಲೀಸರು ಮೃತದೇಹವನ್ನು ನಾಗೇಶ್ ಅವರ ಕುಟುಂಬಕ್ಕೆ ಹಸ್ತಾಂತರಿಸಿದ್ದು, ಶವಪರೀಕ್ಷೆಗೆ ರವಾನಿಸಲಾಗಿದೆ ಎಂದು ಬಜಪೆ ಪೋಲೀಸರು ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *