ಬಂಟ್ವಾಳ: ತಾಲೂಕಿನ ಸಜೀಪನಡು ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನ ಅಂದಾಜು ರೂಪಾಯಿ ಎರಡು ಕೋಟಿ ವೆಚ್ಚದಲ್ಲಿ ಪುನರ್ ನಿರ್ಮಾಣಗೊಳ್ಳುತ್ತಿದ್ದು, ಜೀರ್ಣೋದ್ಧಾರದ ಪ್ರಯುಕ್ತ ಶ್ರೀದೇವರ ನೂತನ ಶಿಲಾಮಯ ಗರ್ಭಗುಡಿ ತೀರ್ಥ ಮಂಟಪದ ಪಾದುಕ ನ್ಯಾಸ ಶುಕ್ರವಾರ ನಡೆಯಿತು. ವಾಸ್ತು ಶಾಸ್ತ್ರಜ್ಞ ಮುನಿಯಂಗಳ ಪ್ರಸಾದ್ ಬಟ್ಟ ಮಾರ್ಗದರ್ಶನದಲ್ಲಿ ಸಜಿಪಮಾಗಣೆ ತಂತ್ರಿ ಮಂಜಿನಡ್ಕ ಸುಬ್ರಹ್ಮಣ್ಯ ಭಟ್ ಅವರು ಪಾದುಕಾನ್ಯಾಸದ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು.
ಶಿಲ್ಪಿ ಅಣ್ಣಪ್ಪ, ವೆಂಕಟೇಶ್ವರಭಟ್ ಮುಳ್ಳುoಜ, ಜಿಲ್ಲಾ ಪಂಚಾಯತ್ ಸದಸ್ಯ ರವೀಂದ್ರ ಕಂಬಳಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಕೆ ರಾಧಾಕೃಷ್ಣ ಆಳ್ವ,ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಬಿ ಸದಾನಂದ ಪೂಂಜಾ, ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷ ಯಶವಂತ ದೇರಾಜೆ, ಮುಗುಳಿಯ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಜಯಶಂಕರ ಬಾಸ್ರಿತ್ತಾಯ, ಕಿಶನ್ ಶೇಣವ, ಸಜಿಪ ಗುತ್ತು ಮುಂಡಪ್ಪ ಶೆಟ್ಟಿ, ಮಾಜಿ ತಾಪಂ ಸದಸ್ಯ ಪ್ರವೀಣ್ ಆಳ್ವ ,ಯತೀಶ್ ಭಂಡಾರಿ ಪ್ರದೀಪ್ ಶೆಟ್ಟಿ, ಶಿವರಾಮ ಭಂಡಾರಿ, ಶಂಕರ ಆಳ್ವ, ಕೆ ಸುಬ್ರಾಯ ಕಾರಂತ , ರಾಮಕೃಷ್ಣ ಭಟ್ ಗಣಪತಿ ಭಟ್, ಶ್ರೀನಿವಾಸ ಶಿವತ್ತಾಯ, ದೇವದಾಸ ಶೆಟ್ಟಿ, ಸುರೇಶ್ ಬಂಗೇರ, ಹರೀಶ್ ಬಂಗೇರ, ಸತ್ಯನಾರಾಯಣ ನಾಯಕ್, ಚಂದ್ರಯ್ಯ ಆಚಾರಿ, ಶ್ರೀನ ಮೇಸ್ತ್ರಿ, ಸುರೇಶ್ ಮಿತ್ತೋಟ, ಶೇಖರ,ಗಂಗಾಧರ, ನಾಗೇಶ, ನಿತಿನ್ ಅರಸ, ರಾಮ ಮೊದಲಾದವರು ಉಪಸ್ಥಿತರಿದ್ದರು.
