ಬಂಟ್ವಾಳ:    ಸಜೀಪನಡು ಗ್ರಾಮಕ್ಕೆ ಮಹಾಮಾರಿ ಕೊರೋನಾ ಬಾಧಿಸಿದಾಗ ಗ್ರಾಮಸ್ಥರು ಸಾಮೂಹಿಕವಾಗಿ ಪ್ರಾರ್ಥಿಸಿಕೊಂಡಂತೆ ಸಜಿಪನಡು ಗ್ರಾಮದ ಗ್ರಾಮ ದೇವರಾದ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವರ ಸನ್ನಿಧಿಯಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯ ಹರಕೆಯನ್ನು ಶುಕ್ರವಾರ ತೀರಿಸಿದರು.

IMG-20200606-WA0031 (1) ಸರಕಾರದ ನಿಯಮಾವಳಿಯಂತೆ ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ವಿದ್ಯುಕ್ತವಾಗಿ ಆಚರಿಸಲಾಯಿತು. ಕ್ಷೇತ್ರದ ಶಕ್ತಿ ಗಣಪತಿ ದೇವರಿಗೆ ಸಾಮೂಹಿಕ ಅಪ್ಪದ ಪೂಜೆ,  ಕ್ಷೇತ್ರದ ಆರಾಧ್ಯ ಮೂರ್ತಿ ಷಣ್ಮಖ ಸುಬ್ರಹ್ಮಣ್ಯ ದೇವರಿಗೆ ಫಲಪಂಚಾಮೃತ ಅಭಿಷೇಕ, ಕಲ್ಪೋಕ್ತ, ಪ್ರಸನ್ನ ಪೂಜೆ ಚಂದ್ರಗ್ರಹಣ ಪರ್ವಕಾಲದಲ್ಲಿ ನೆರವೇರಿಸಲಾಯಿತು.ಬಳಿಕ ಅನ್ನಸಂತರ್ಪಣೆಯು ನಡೆಯಿತು.ಮಾಗಣೆಯ ತಂತ್ರಿಗಳಾದ ಎಂ.ಸುಬ್ರಹ್ಮಣ್ಯ ಭಟ್ ಅವರು ಧಾರ್ಮಿಕ ವಿಧಿಗಳನ್ನು  ನೆರವೇರಿಸಿದರು. ಪ್ರಮುಖರಾದ ಕೆ ರಾಧಾಕೃಷ್ಣ ಆಳ್ವ, ಎಂ ವೆಂಕಟೇಶ್ವರ ಭಟ್ಟ , ರಾಮಕೃಷ್ಣ ಭಟ್, ಪ್ರದೀಪ್ ಶೆಟ್ಟಿ, ಕಿಶನ್, ಸುರೇಶ್ ಬಂಗೇರ, ಮೊದಲಾದವರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *