ಬಂಟ್ವಾಳ: ತುಂಬೆ ವಲಯದ ತುಂಬೆ’ ಎ’ ಕಾರ್ಯಕ್ಷೇತ್ರದ ಜ್ಯೋತಿಗುಡ್ಡೆ ನಿವಾಸಿ ಆನಂದರವರ ಪತ್ನಿ ಸರೋಜರವರಿಗೆ ಅನಾರೋಗ್ಯದ ಹಿನ್ನಲೆಯಲ್ಲಿ ವಾಟರ್ ಬೆಡ್ ಹಾಗೂ ಕರಿಯಂಗಳ ನಿವಾಸಿ ವೆಂಕಪ್ಪ ಆಚಾರ್ಯ ಅವರ ಪುತ್ರಿ ಲೀಲಾ ಅವರಿಗೆ ವೀಲ್ ಚೆಯರ್ ವಿತರಿಸಲಾಯಿತು.
ಶ್ರೀ ಕ್ಷೇ.ಧ.ಗ್ರಾ.ಯೋ.ಯ ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ,ತಾಲೂಕು ಯೋಜನಾಧಿಕಾರಿ ಜಯಾನಂದ.ಪಿ.,ತುಂಬೆ ವಲಯ ಮೇಲ್ವಿಚಾರಕಿ ಮಮತಾ,ಬಂಟ್ವಾಳ ತಾಲೂಕು ಕೇಂದ್ರ ಒಕ್ಕೂಟದ ಅಧ್ಯಕ್ಷ ಮಾಧವ ವಳವೂರು,ತುಂಬೆ ಒಕ್ಕೂಟದ ಉಪಾಧ್ಯಕ್ಷೆ ಕಮಾಲಾಕ್ಷಿ,ಸೇವಾ ಪ್ರತಿನಿಧಿ ಅನಿತಾರವರು ಉಪಸ್ಥಿತರಿದ್ದರು.
