ಕೈಕಂಬ: ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಪುರುಷೋತ್ತಮ ಮುಂಡಡ್ಕ ತೆಂಕಬೆಳ್ಳೂರು ಇವರ ಮನೆಗೆ ದೀನಬಂಧುವಿನ ಸದಸ್ಯರು ಭೇಟಿ ನೀಡಿ 25 ಕೆ.ಜಿ ಅಕ್ಕಿ ಹಾಗೂ 10000 ರೂಪಾಯಿ ಧನಸಹಾಯದ ಚಕ್ ವಿತರಿಸಿದರು.

ದೀನಬಂಧುವಿನ ಸಕ್ರಿಯ ಸದಸ್ಯರಾಗಿದ್ದ ಪ್ರವೀಣ್ ವರಕೋಡಿ ಇವರ ಮನೆಗೆ ದೀನಬಂಧುವಿನ ಸದಸ್ಯರು ಭೇಟಿ ನೀಡಿ 10000 ರೂಪಾಯಿ ಚಕ್ ನೀಡಿದರು. ಈ ಧನಸಹಾಯವನ್ನು ದೀನಬಂಧುವಿನ ಇತರ ಸದಸ್ಯರ ಅನುಮತಿ ಮೇರೆಗೆ ಯೋಗೀಶ್ ಪೂಜಾರಿ( ಮಾಜಿ ಯೋಧರು ಭಾರತೀಯ ಸೇನೆ) ,ವಸಂತ್ ಮಜಲೋಡಿ, ದಿನೇಶ್ ಬಟ್ಟಾಜೆ, ದಿನೇಶ್ ದೇವರ ಗುಡ್ಡೆ, ರವಿ ಅಮೀನ್ ದೇವರ ಗುಡ್ಡೆ, ಭಾಸ್ಕರ್ ಮುಂಡಡ್ಕ, ಮಧುಚಂದ್ರ ರೆಂಜಕೋಡಿ, ಹಾಗೂ ಜನಾರ್ಧನ್ ಹೆಚ್.ಎಸ್ ಕೊಳತ್ತಮಜಲು ಮುಂತಾದ ಸದಸ್ಯರು ಹಸ್ತಾಂತರಿಸಿದರು.
