ಬಂಟ್ವಾಳ: ಪುರಸಭೆ ಮಾಜಿ ಅಧ್ಯಕ್ಷೆ,ಬಿಜೆಪಿ ಕಾರ್ಯಕರ್ತೆ ಯಶೋಧ (೫೭)ಅವರು ಮಂಗಳವಾರ ರಾತ್ರಿ ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ನಿಧನರಾಗಿದ್ದಾರೆ. ದೀರ್ಘ ಕಾಲದ ಅಸೌಖ್ಯದಲ್ಲಿದ್ದ ಅವರ ಆರೋಗ್ಯದಲ್ಲಿ ಏರುಪೇರು ಕಂಡ ಹಿನ್ನಲೆಯಲ್ಲಿಸೋಮವಾರ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು,ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ.
ಅಧ್ಯಕ್ಷೆ,ಉಪಾಧ್ಯಕ್ಷರಾಗಿದ್ದರು:
ಬಂಟ್ವಾಳ ಪುರಸಭೆಗೆ 2001 ಮತ್ತು 2008 ರಲ್ಲಿ ಭಂಡಾರಿಬೆಟ್ಟು ವಾರ್ಡಿ ನಿಂದ ಸದಸ್ಯೆಯಾಗಿ ಆಯ್ಕೆಯಾಗಿದ್ದ ಅವರು,ಆರಂಭದಲ್ಲಿ ಪುರಸಭೆಯ ಉಪಾಧ್ಯಕ್ಷರಾಗಿ,ಬಳಿಕ ಅಧ್ಯಕ್ಷರಾಗಿಯು ಸೇವೆಸಲ್ಲಿಸಿದ್ದರು. ಹಾಗೆಯೇ ಬಿಜೆಪಿ ಮಹಿಳಾಮೋರ್ಚಾದಲ್ಲು ಸಕ್ರಿಯ ಕಾರ್ಯಕರ್ತೆಯಾಗಿದ್ದ ಅವರು ಪುತ್ತೂರು ಗುಡಿ ಕೈಗಾರಿಕೆಸಂಘದ ಮಾಜಿ ನಿರ್ದೇಶಕಿಯು ಆಗಿದ್ದರು. ಬಂಟ್ವಾಳ ತಾಲೂಕು ಕುಲಾಲ ಸಂಘಟನೆಯಲ್ಲು ಮುಂಚೂಣಿಯಲ್ಲಿದ್ದರು.ಉದ್ಯಮಿ, ಪತಿ ಕೃಷ್ಣಪ್ಪ ಕಲ್ಲಡ್ಕ,ಒರ್ವ ಪುತ್ರ,ಒರ್ವಪುತ್ರಿ ಯನ್ನು ಅಗಲಿದ್ದಾರೆ.
