ಬಂಟ್ವಾಳ: ಭಾನುವಾರ ನೇತ್ರಾವತಿ‌ ನದಿಗೆ ಹಾರಿ ಆತ್ಮಹತ್ಯೆಗೈದ ಕಲ್ಲಡ್ಕ ಕೊಳಕೀರುವಿನ ಯುವಕ ನಿಶಾಂತ್ ಅವರ ರಕ್ಷಣೆಗೆ ನದಿಗೆ ಹಾರಿದ ಗೂಡಿನ ಬಳಿಯ ಐದು ಮಂದಿ ಯುವಕರಿಗೆ ಬಂಟ್ವಾಳ ಜೇಸಿಐ ವತಿಯಿಂದ ಸೋಮವಾರ ಗೌರವ ಸಲ್ಲಿಸಲಾಯಿತು.IMG-20200525-WA0027
ಭಾನುವಾರದ ರಕ್ಷಣಾ ಕಾರ್ಯಚರಣೆಯನ್ನು ಕಣ್ಣಾರೆ ಕಂಡ ಜೆಸಿಐ ಬಂಟ್ವಾಳದ ಅಧ್ಯಕ್ಷ ಸದಾನಂದ ಬಂಗೇರ ಯುವಕರ ಮಾನವೀಯ ಕಾರ್ಯವನ್ನು ಅಭಿನಂಧಿಸಿ ಕೃತಜ್ಞತೆ ವ್ಯಕ್ತ ಪಡಿಸಿದ್ದಾರೆ.  ಅವರು ಮಾತನಾಡಿ ಮಾನವೀಯತೆಗಿಂತ ಮಿಗಿಲಾದ ಧರ್ಮವಿಲ್ಲ ಎನ್ನುವ ಮನೋಭಾವನೆಯಿಂದ ಈ ಯುವಕರು ಪ್ರಾಣದ ಹಂಗು ತೊರೆದು ನದಿಗೆ ಹಾರಿ ಯುವಕನ ರಕ್ಷಣೆಗೆ ಪ್ರಯತ್ನಿಸಿರುವುದು  ಅಭಿನಂದನೀಯ. ಅವರನ್ನು ಗೌರವಿಸುವುದು ನಾಗರೀಕರ ಕರ್ತವ್ಯ ಎಂದು ತಿಳಿಸಿದರು.‌
ಈ ಸಂದರ್ಭ ಜೇಸಿಐ ಬಂಟ್ವಾಳದ ಸದಸ್ಯರಾದ ನಾಗೇಶ್ ಬಾಳೆಹಿತ್ಲು, ಸುರೇಶ್ ಕುಮಾರ್ ನಾವೂರು, ಸಂದೀಪ್ ಸಾಲ್ಯಾನ್, ಯತೀಶ್ ಕರ್ಕೆರಾ, ಉಮೇಶ್ ಮೂಲ್ಯ, ಗಣೇಶ್ ಕುಲಾಲ್, ವಿಜಯ ಕುಲಾಲ್, ರೋಷನ್ ರೈ ಮೊದಲಾದವರಿದ್ದರು.

By suddi9

Leave a Reply

Your email address will not be published. Required fields are marked *