ಕೈಕಂಬ: ಭಾನುವಾರದ ಸಂಪೂರ್ಣ ಲಾಕ್‍ಡೌನ್ ನಿಮಿತ್ತ ಗುರುಪುರ, ವಾಮಂಜೂರು, ಕೈಕಂಬ ಪ್ರದೇಶದ ಎಲ್ಲ ಅಂಗಡಿ ಮುಂಗಟ್ಟು ಬಂದ್ ಆಗಿದ್ದು ಪತ್ರಿಕೆ, ಹಾಲು, ಔಷಧಿಗಾಗಿ ಗ್ರಾಹಕರು ಪರದಾಡುವಂತಾಯಿತು.
ರಾಷ್ಟ್ರೀಯ ಹೆದ್ದಾರಿ(169) ಬಿಕೋ ಎನ್ನುತ್ತಿದ್ದು, ಸ್ಥಳೀಯ ಒಂದೆರಡು ದ್ವಿಚಕ್ರ ವಾಹನಗಳ ಓಡಾಟ ಕಂಡು ಬಂತು. ಈದ್ ಹಬ್ಬದ ನಿಮಿತ್ತ ಮುಸ್ಲಿಂ ಬಂಧುಗಳು ಶನಿವಾರವೇ ಸಣ್ಣಪುಟ್ಟ ಖರೀದಿ ನಡೆಸಿದ್ದರು. ಯಾವುದೇ ಮಸೀದಿಗಳಲ್ಲಿ ಈದ್ ಪ್ರಾರ್ಥನೆ ಕಂಡು ಬಂದಿಲ್ಲ. ಆದರೆ ವೈಜ್ಞಾನಿಕ ಪರಿಕಲ್ಪನೆರಹಿತ ಭಾನುವಾರದ ಸಂಪೂರ್ಣ ಲಾಕ್‍ಡೌನ್‍ಗೆ(ಕಫ್ರ್ಯೂ) ಜನಸಾಮಾನ್ಯರಿಂದ ಎಲ್ಲೆಡೆ ಟೀಕೆ ವ್ಯಕ್ತವಾಗಿದೆ.
