ಬಂಟ್ವಾಳ : ತಾಲೂಕಿನ ಕನ್ಯಾನ ಬಾಳೆಕೋಡಿಯಲ್ಲಿರುವ ಶ್ರೀ ಕಾಶೀಕಾಳಭೈರವೇಶ್ವರ ಶಿಲಾಂಜನ ಕ್ಷೇತ್ರದ  ಶ್ರೀ ಡಾ. ಶಶೀಕಾಂತಮಣಿ ಸ್ವಾಮೀಜಿ (45) ಸೋಮವಾರ ತಡರಾತ್ರಿ ಶಿವೈಕ್ಯವಾದರು. ಅವರು ಕೆಲ ಸಮಯದಿಂದ ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿದ್ದರು.
IMG-20200519-WA0005ದಶಕದಿಂದೀಚೆಗೆ ಕ್ಷೇತ್ರದ ಮೂಲಕ ಆಧ್ಯಾತ್ಮ, ಸಾಂಸ್ಕೃತಿಕ, ಸಾಹಿತ್ಯ ಚಟುವಟಿಕೆಗಳನ್ನು ನಡೆಸುತ್ತಿದ್ದ ಅವರು, ಈ ನಿಟ್ಟಿನಲ್ಲಿ ಹಲವು ಸಮಾವೇಶ, ವಿಚಾರಗೋಷ್ಠಿಗಳನ್ನೂ ಆಯೋಜಿಸಿದ್ದರು. ಸಮಾಜದ, ತುಳುನಾಡಿನ ವಿಚಾರಗಳಿಗೆ ಸಂಬಂಧಿಸಿ ಕ್ಷಿಪ್ರವಾಗಿ ಸ್ಪಂದಿಸುತ್ತಿದ್ದ ಸ್ವಾಮೀಜಿ ಹಿಂದೆ ಕಂಬಳ ಪರ ಹೋರಾಟದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಸ್ವತಃ ಕವಿಯಾಗಿದ್ದ ಅವರು ನಾನಾ ಕವಿಗೋಷ್ಠಿಗಳಲ್ಲಿ ಭಾಗವಹಿಸಿ ಗಮನ ಸೆಳೆದಿದ್ದರು. ಅವರಿಗೆ ವಿಶ್ವವಿದ್ಯಾನಿಲಯವೊಂದು ಗೌರವ ಡಾಕ್ಟರೇಟ್ ನೀಡಿ ಗೌರವಿಸಿತ್ತು.

By suddi9

Leave a Reply

Your email address will not be published. Required fields are marked *