ವೇಣೂರು: ಬಂಟ್ವಾಳ ತಾಲೂಕಿನ ಕಜೆಕಾರು ಊರಿನಲ್ಲಿ ವಾಸಿಸುತ್ತಿದ್ದ “ನಾರಾಯಣ ಮೂಲ್ಯ ಕುದ್ಕೂಲಿ ಪಾದೆ” ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದರು ಎಂದು ವಿಷಯ ತಿಳಿದು “ಬಲಿಷ್ಠ ಬಿಲ್ಲವೆರ್” ವಾಟ್ಸಾಪ್ ತಂಡದಿಂದ “ಹೃದಯ ಸ್ಪಂದನೆ” ಯೋಜನೆಯ ಮೂರನೇ ಸೇವೆಯಾಗಿ ಅವರ ಮನೆಗೆ ತೆರಳಿ 10,000 ರೂಪಾಯಿಗಳ ಸಹಾಯಧನ ನೀಡಲಾಯಿತು. 
ಕೋವಿಡ್ -19 ಕೊರೋನಾ ದಿಂದ ಲಾಕ್ ಡೌನ್ ಆಗಿದ ಈ ಸಂದರ್ಭದಲ್ಲಿ ಜೀವನ ಸಾಗಿಸಲು ತುಂಬಾ ಕಷ್ಟಕರವಾದ ವಿಷಯವನ್ನು ಮನಗಂಡು ಇವರ ಮೆಡಿಕಲ್ ಖರ್ಚಿನ ಜೊತೆಗೆ ದಿನಸಿ ಸಾಮಾಗ್ರಿಗಳನ್ನು “ಬಲಿಷ್ಠ ಬಿಲ್ಲವೆರ್” ವಾಟ್ಸಾಪ್ ಗ್ರೂಪ್ ನ ತಂಡದ ಮುಖಾಂತರ 25KG ಅಕ್ಕಿಯನ್ನು ಸಹ ನೀಡಲಾಯಿತು.
ಈ ಸಂದರ್ಭದಲ್ಲಿ “ಬಲಿಷ್ಠ ಬಿಲ್ಲವೆರ್” ವಾಟ್ಸಾಪ್ ತಂಡದ ಸನತ್ ಅಂಚನ್, ಸಂಪತ್ ಅಂಚನ್, ಯುವ ಬಿರುವೆರ್ ಸಂಘಟನೆಯ ಮಾಸ್ಟರ್ ಮಧು ಬಿರ್ವ ಹಾಗೂ ನಿಶಾಂತ್ ಪೂಜಾರಿ ಮರೋಡಿ ಜೊತೆಗಿದ್ದರು.
