ಬಂಟ್ವಾಳ: ಊರಿಗೆ ಮುಂದಾದ ವಲಸೆ ಕಾರ್ಮಿಕರನ್ನು ತಹಶೀಲ್ದಾರರು ಮತ್ತು ಪೋಲಿಸರು ಮನವೊಲಿಸಿ ಮತ್ತೆ ಒಂದಷ್ಟು ದಿನ ಉಳಕೊಳ್ಳಲು ವ್ಯವಸ್ಥೆ ಕಲ್ಪಿಸಿದ ವಿದ್ಯಮಾನ ಬುಧವಾರ ಮಾಣಿಯಲ್ಲಿ ನಡೆದಿದೆ.17-53-29-IMG-20200506-WA0031-768x432

ಬರಿಮಾರುಗ್ರಾಮದಲ್ಲಿ ಅಧಿಕೃತ ಮರಳುಗಾರಿಕೆಯಲ್ಲಿ ನಿರತರಾಗಿದ್ದ ಸುಮಾರು 200 ರಷ್ಟು ಉ.ಪ್ರ. ಮತ್ತು ಬಿಹಾರ ಮೂಲದ ವಲಸೆ ಕಾರ್ಮಿಕರು ಊರಿಗೆ ತೆರಳುವ ನಿಟ್ಟಿನಲ್ಲಿ ಪಾದಯಾತ್ರೆ ಮಾಡಿಕೊಂಡು ಮಾಣಿ ಮೈದಾನ ತನಕ ಬಂದಿದ್ದರು.ಲಾಕ್ ಡೌನ್ ನಿಂದಾಗಿ ಕೆಲಸವಿಲ್ಲದೆ ಅಲ್ಲಿಯೇ ತಂಗಿದ್ದ ಈ ಕಾರ್ಮಿಕರು ಇದೀಗ ಊರೊಗೆ ತೆರಳುವ ನಿಟ್ಟಿನಲ್ಲಿ  ಪಾದಯಾತ್ರೆ ಮಾಡಿಕೊಂಡೆ ಬಂದಿದ್ದರು.

ಈ ಬಗ್ಗೆ ಸುದ್ದಿ ತಿಳಿದ ಬಂಟ್ವಾಳ ತಹಶೀಲ್ದಾರ್ ಎಸ್.ಆರ್.ರಶ್ಮೀ ಹಾಗೂ ಪೋಲಿಸ್ ಅಧಿಕಾರಿಗಳಾದ ವೆಲಂಟಿನ್ ಡಿಸೋಜ,ನಾಗರಾಜ್ ,ಪ್ರಸನ್ನ,ವಿನೋದ್ ಅವರು ಸ್ಥಳಕ್ಕೆ ತೆರಳಿ ಕಾರ್ಮಿಕರ ಅಹವಾಲು ಆಲಿಸಿದರು.ಬಳಿಕ ಒಂದಷ್ಟು ದಿನ ಉಳಕೊಂಡು ಮತ್ತೆ ಊರಿಗೆ ಕಳುಹಿಸಿಕೊಡುವ ಭರವಸೆಯಿತ್ತರು.ಅಷ್ಟರವರೆಗೆ ಬರಿಮಾರು ಮರಳುಗಾರಿಕೆ ಧಕ್ಕೆಯಲ್ಲಿಯೇ ಉಳಕೊಳ್ಳಲು ವ್ಯವಸ್ಥೆ ಕಲ್ಪಿಸಿದರು.ಅಲ್ಲಿಂದ ಪಾದಯಾತ್ರೆಯಲ್ಲಿ ಬಂದಿದ್ದ ಕಾರ್ಮಿಕರು ವಾಪಾಸ್ ಬರಿಮಾರಿನತ್ತ ತೆರಳಿದರು.

By suddi9

Leave a Reply

Your email address will not be published. Required fields are marked *