ಬೆಳ್ತಂಗಡಿ: ರೈತರನ್ನು ಜಮೀನಿನಿಂದ ಹೊರತಳ್ಳುವ ವ್ಯವಸ್ಥಿತ ಪಿತೂರಿಯ ವಿರುದ್ಧ ಜನಚಳವಳಿ ತೀವ್ರಗೊಳಿಸುವ ಅಗತ್ಯವಿದ್ದು, ಸರ್ಕಾರಗಳ ಒಕ್ಕಲೆಬ್ಬಿಸುವ ನೀತಿಯ ವಿರುದ್ಧ ಅ. 13 ರಂದು ವಿಧಾನಸೌಧ ಚಲೋ ಕಾರ್ಯಕ್ರಮ ನಡೆಯಲಿದೆ ಎಂದು ಸಿ.ಪಿ.ಐ(ಎಂ) ದ.ಕ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಬಿ.ಎಮ್ ಭಟ್ ಹೇಳಿದರು.
ಅವರು ಅಳದಂಗಡಿಯಲ್ಲಿ ಸಿ.ಪಿ.ಐ(ಎಮ್) ನೇತೃತ್ವದಲ್ಲಿ ಜರುಗಿದ ರೈತರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ನಮ್ಮನ್ನಾಳುವ ಸಕರ್ಾರಗಳು ರಾಷ್ಟ್ರೀಯ ಉದ್ಯಾನವನ ಹುಲಿ, ಆನೆ, ಸಂರಕ್ಷಣೆ, ಪೈಪ್ಲೈನ್ಗಳ ಹೆಸರಿನಲಿ, ಬಹುರಾಷ್ಟ್ರೀಯ ಕಂಪೆನಿಗಳ ದಾಸರಾಗಿ ಬಡ ಕೃಷಿಕರನ್ನು ಒಕ್ಕಲೆಬ್ಬಿಸಲು ಮುಂದಾಗುತ್ತಿರುವುದು ನ್ಯಾಯವೇ ಎಂದು ಪ್ರಶ್ನಿಸಿದ ಅವರು ಬಡವರನ್ನು ಬೀದಿಪಾಲು ಮಾಡಿ ಪರಿಸರ, ವನ್ಯಮೃಗ ಸಂರಕ್ಷಣೆಗೆ ಮಂದಾಗಿರುವ ಕ್ರಮ ನಾಚಿಕೆಗೇಡಿನ ವಿಚಾರ ಎಂದರು.
ಶ್ರೀಮಂತ ಭೂಮಾಲಿಕರು ಸರ್ಕಾರಿ, ಅರಣ್ಯ ಜಮೀನನ್ನು ಅತಿಕ್ರಮಿಸಿಕೊಂಡಿದ್ದರೂ ಸಕರ್ಾರ ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲವೆಂದು ಆರೋಪಿಸಿದ ಅವರು ಅಲ್ಪಸಂಖ್ಯಾತ ಬಡಜನರು ತುಂಡು ಭೂಮಿಗಾಗಿ ಹೋರಾಟದ ಹಾದಿ ಹಿಡಿದಿರುವುದು ದುರಂತವೆಂದರು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಹರಿದಾಸ್.ಎನ್.ಎಮ್ ಬಡವರಿಗೆ ನಿವೇಶನ ಹಂಚಲು ಸಾದ್ಯವಾಗದ ಸಕರ್ಾರ ಇದೀಗ ಬಡರೈತರಿಗೆ ಒಕ್ಕಲೆಬ್ಬಿಸುವ ಬಗ್ಗೆ ನೋಟೀಸು ಜಾರಿ ಮಾಡುತ್ತಿದ್ದು, ಭೂಮಾಲಿಕರ ಅತಿಕ್ರಮಣದ ಬಗ್ಗೆ ಮೌನವಹಿಸಿ ಬಡವರನ್ನು ಒಕ್ಕಲೆಬ್ಬಿಸಲು ಮುಂದಾದರೆ ಪರಿಣಾಮ ಎದುರಿಸಬೇಕಾದೀತು. ಬಡರೈತರ ಪರವಾಗಿ ಯಾವುದೇ ತ್ಯಾಗದ ಹೋರಾಟಕ್ಕೆ ಸಿದ್ದವೆಂದರು.
ವೇದಿಕೆಯಲ್ಲಿ ಸಿ.ಪಿ.ಐ(ಎಂ) ಕುದ್ಯಾಡಿ ಶಾಖಾ ಕಾರ್ಯದರ್ಶಿ ಲೋಕೇಶ ಕುದ್ಯಾಡಿ, ಸಿ.ಐ.ಟಿ.ಯು ಮುಖಂಡ ಜೆರಿ ಪತ್ರಾವೋ ಉಪಸ್ಥಿತರಿದ್ದರು. ಅಧ್ಯಕ್ಷತೆಯನ್ನು ರೈತ ಮುಖಂಡ ಮಹಾಬಲ ಕೋಟ್ಯಾನ್ ವಹಿಸಿದ್ದರು.
ಈ ಸಂದರ್ಭ ನೂತನ ಅಳದಂಗಡಿ ವಲಯ ಹೋರಾಟ ಸಮಿತಿಯೊಂದನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಕೊರಗಪ್ಪ ಪೂಜಾರಿ ಕುದ್ಯಾಡಿ, ಉಪಾಧ್ಯಕ್ಷರಾಗಿ ಮಹಾಬಲ ಕೋಟ್ಯಾನ್, ಕಾರ್ಯದರ್ಶಿಯಾಗಿ ಸುಂದರಿ ಪಿಲ್ಯ, ಜೊತೆಕಾರ್ಯದರ್ಶಿಯಾಗಿ ಸಂತೋಷ್ ಪಿಲ್ಯ, ಕೋಶಾಧಿಕಾರಿಯಾಗಿ ಮೀನಾಕ್ಷಿ ಪಡಂಗಡಿ ಆಯ್ಕೆಯಾದರು.
