ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಓಡಿಲ್ನಾಳ, ಪ್ರಗತಿಬಂಧು ಒಕ್ಕೂಟಗಳು ಓಡಿಲ್ನಾಳ ಮತ್ತು ಕಟ್ಟದ ಬೈಲು, ಜನಜಾಗೃತಿ ಗ್ರಾಮ ಸಮಿತಿ ಓಡಿಲ್ನಾಳ ಬಿ ವಿಭಾಗ ಮತ್ತು ಊರವರ ಸಂಯುಕ್ತ ಆಶ್ರಯದಲ್ಲಿ ಸಾಮೂಹಿಕ ಶನಿಪೂಜೆ ಮತ್ತು ಧಾರ್ಮಿಕ ಸಭೆ ನಡೆಯಿತು.
ಕುದ್ರೋಳಿ ನಾರಾಯಣಗುರು ಕಾಲೇಜಿನ ಉಪನ್ಯಾಸಕ ಕೇಶವ ಬಂಗೇರ ಮಾತನಾಡಿ ಸಂಸ್ಕೃತಿ ಮತ್ತು ಸಂಸ್ಕಾರವನ್ನು ಉಳಿಸಿ ಬೆಳೆಸಿದಲ್ಲಿ, ಧಾರ್ಮಿಕ ಪ್ರಜ್ಞೆಯನ್ನು ಮೂಡಿಸುವಲ್ಲಿ, ಸಾಮೂಹಿಕ ಶನಿಪೂಜೆಯು ಪ್ರಮುಖ ಪಾತ್ರ ವಹಿಸುತ್ತದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಾಸುದೇವ ರಾವ್ ಕೊಡಂಗೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಎಸ್ಕೆಡಿಆರ್ಡಿಪಿ ಮಾನವ ಸಂಪನ್ಮೂಲ ಅಭಿವೃದ್ಧಿ ವಿಭಾಗದ ನಿರ್ಧೇಶಕ ಚಂದ್ರಶೇಖರ ನೆಲ್ಯಾಡಿ, ಕಳಿಯ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ವಸಂತ ಮಜಲು, ಶಿಕ್ಷಕ ಕೆ ಧರಣೇಂದ್ರ ಕೆ ಜೈನ್, ಕೃಷ್ಣ ನಾಯಕ್ , ಪುಷ್ಪಾವತಿ, ವಲಯ ಮೇಲ್ವಿಚಾರಕಿ ರವಿಕಲಾ , ಸಂಜೀವ ಮಡಿವಾಳ ಉಪಸ್ಥಿತರಿದ್ದರು.
ಒಕ್ಕೂಟದ ಅಧ್ಯಕ್ಷ ಸೋಮನಾಥ ಸ್ವಾಗತಿಸಿ, ಸೇವಾನಿರತ ಹರಿಪ್ರಸಾದ್ ಮತ್ತು ವಿಠಲ ಶೆಟ್ಟಿ ಉಪ್ಪಡ್ಕ ಕಾರ್ಯಕ್ರಮ ನಿರೂಪಿಸಿದರು. ಪಿ.ಸಿ ಮೂಲ್ಯ ವಂದಿಸಿದರು.

