ಬಂಟ್ವಾಳ: ಇಲ್ಲಿನ ವಿಧಾನಸಭಾ ಕ್ಷೇತ್ರದಲ್ಲಿ ಯಾವುದೇ ಪಡಿತರಚೀಟಿ ಇಲ್ಲದ ಎರಡು ಸಾವಿರಕ್ಕು ಅಧಿಕ ಅಶಕ್ತ ಬಡಕುಟುಂಬಗಳಿಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರ ವಯಕ್ತಿಕ ನೆಲೆಯಲ್ಲಿ ಸೋಮವಾರ ಅಕ್ಕಿಯನ್ನು ವಿತರಿಸಲಾಯಿತು.
ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಾರ್ಯಪಡೆಯ ಸಭೆ ನಡೆಸಿದ ಸಂದರ್ಭ ಯಾವುದೇ ಪಡಿತರ ಚೀಟಿ ಹೊಂದಿರದ ಬಡ ಕಟುಂಬಗಳ ಸಮಸ್ಯೆಯು ಶಾಸಕರ ಗಮನೆಕ್ಕೆ ಬಂದಿದ್ದು, ತಕ್ಷಣ ಶಾಸಕರು ಬಂಟ್ವಾಳ ತಾಲೂಕು ಕಾರ್ಯ ನಿರ್ವಾಹಕಾಧಿರಿಯವರನ್ನು ಸಂಪರ್ಕಿಸಿ ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ಪಡಿತರ ಚೀಟಿ ಹೊಂದಿರದ ಕುಟುಂಬಗಳ ಪಟ್ಟಿ ಮಾಡಿ ನೀಡುವಂತೆ ಸೂಚಿಸಿದ್ದರು.
ಅದರಂತೆ ಎರಡು ಸಾವಿರಕ್ಕೂ ಮಿಕ್ಕಿ ಆಶಕ್ತ ಕುಟುಂಬಗಳ ಪಟ್ಟಿಯನ್ನು ಅವರು ಶಾಸಕರಿಗೆ ಸಲ್ಲಿಸಿದ್ದು, ಶಾಸಕ ರಾಜೇಶ್ ನಾಯ್ಕ್ ಅವರು ತಮ್ಮ ವೈಯಕ್ತಿಕ ನೆಲೆಯಲ್ಲಿ ಬಂಟ್ವಾಳ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಎರಡು ಸಾವಿರ ಮಿಕ್ಕಿ ಕುಟುಂಬಗಳಿಗೆ ಅಕ್ಕಿ ನೀಡುವ ಕಾರ್ಯಕ್ರಮಕ್ಕೆ ಬಿ.ಸಿ.ರೋಡಿನಲ್ಲಿರುವ ತಮ್ಮ ಕಛೇರಿಯಲ್ಲಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಬಂಟ್ವಾಳ ಬೂಡ ಅಧ್ಯಕ್ಷರಾದ ದೇವದಾಸ್ ಶೆಟ್ಟಿ, ಬಂಟ್ವಾಳ ಕ್ಷೇತ್ರ ಬಿ.ಜೆ.ಪಿ ಅಧ್ಯಕ್ಷ ದೇವಪ್ಪ ಪೂಜಾರಿ, ಪ್ರಧಾನ ಕಾರ್ಯದರ್ಶಿ, ಡೊಂಬಯ್ಯ ಅರಳ,ಪಕ್ಷದ ಪ್ರಮುಖರಾದ ವಜ್ರನಾಥ ಕಲ್ಲಡ್ಕ, ಉಮೇಶ್ ಅರಳ, ಕಾರ್ತಿಕ್ ಬಲ್ಲಾಳ್, ಸುದರ್ಶನ್ ಬಜೆ, ಪ್ರಮೋದ್ ಅಜ್ಚಿಬೆಟ್ಟು, ಶ್ರೀಕಾಂತ್ ಶೆಟ್ಟಿ ಸಜಿಪ , ಗಣೇಶ್ ರೈ ಮಾಣಿ, ಪುರುಷೋತ್ತಮ ಶೆಟ್ಟಿ ವಾಮದಪದವು, ಯಶವಂತ ನಗ್ರಿ, ಜಯರಾಮ್ ನಾಯ್ಕ್ ಕೊಳ್ನಾಡು, ಪ್ರಕಾಶ್ ಅಂಚನ್, ಸೀತಾರಾಮ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.
