ಬೆಳ್ತಂಗಡಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬೆಳ್ತಂಗಡಿ,  ಸಮಿತಿ ಸರಕಾರಿ ಪ್ರೌಢಶಾಲೆ ನಡ, ಗ್ರಾಮ ಪಂಚಾಯತು ನಡ, ಸ್ತ್ರೀಶಕ್ತಿ ಗೊಂಚಲು ನಡ-ಕನ್ಯಾಡಿ, ಕಪುಚಿನ್ ಕೃಷಿಕಾ ಸೇವಾ ಕೇಂದ್ರ ದಯಾಳ್ಬಾಗ್ ವಿಮುಕ್ತಿ, ತಾಲೂಕು ಕಾನೂನು ಸೇವಾ ಸಮಿತಿ ಬೆಳ್ತಂಗಡಿ ಇವುಗಳ ಸಂಯುಕ್ತ ಆಶ್ರಯದಲ್ಲಿ ನಡೆದ  ಗ್ರಾಮ ಪಂಚಾಯತು ಮಟ್ಟದ ಪೌಷ್ಠಿಕ ಆಹಾರ ಸಪ್ತಾಹ ಸಮಾರಂಭ  ಸರಕಾರಿ ಪ್ರೌಢಶಾಲೆ ನಡೆಯಿತು.
7DLCDPO

ಕಾರ್ಯಕ್ರಮವನ್ನು ಉದ್ಘಾಟಿಸಿದ ಜೆಎಂಎಫ್ಸಿ ಬೆಳ್ತಂಗಡಿ ಇದರ ಪ್ರಧಾನ ಹಿರಿಯ ಸಿವಿಲ್ ನ್ಯಾಯಧೀಶರಾದ ರಾಘವೇಂದ್ರ ಮಾತನಾಡಿ ನಮ್ಮ ರಾಜ್ಯದಲ್ಲಿರುವ ಅಪೌಷ್ಠಿಕತೆಯಳ್ಳ ಮಕ್ಕಳ ಅಂಕಿ ಅಂಶಗಳೊಂದಿಗೆ ಮಾಹಿತಿ ನೀಡಿ ಅಂಗನವಾಡಿ ಕೇಂದ್ರಗಳಲ್ಲಿ ಸಿಗುವಂತಹ ಆಹಾರ ಪೌಷ್ಠಿಕ ಭರಿತವಾಗಿದ್ದು, ಇದನ್ನು ಅರ್ಹ ಫಲಾನಿಭವಿಗಳು ಪಡೆದುಕೊಂಡು ಇದರ ಸದುಪಯೊಗವನ್ನು ಮಾಡಬೇಕು. ಈ ಸಮಸ್ಯೆಯನ್ನು ಹೋಗಲಾಡಿಸಲು ಇಂತಹ ಕಾರ್ಯಕ್ರಮಗಳನ್ನು ಏರ್ಪಡಿಸಿ ಮಾಹಿತಿ ನೀಡುವುದು ಇಂದಿನ ದಿನಗಳಲ್ಲಿ ಅವಶ್ಯಕತೆ ಇದೆ ಎಂದರು.
ಬೆಳ್ತಂಗಡಿ ಸಿವಿಲ್ ನ್ಯಾಯಾಧೀಶರಾದ ವಿಜೇತ್, ಜಿ .ಪಂ. ಸದಸ್ಯ ಶೈಲೇಶ್ ಕುಮಾರ್ ತಾ.ಪಂ. ಸದಸ್ಯ ಗಣೇಶ್ ಕಣಾಲು, ಸಂಪನ್ಮೂಲ ವ್ಯಕ್ತಿ ಉಪನ್ಯಾಸಕಿ ವಸಂತಿ ಕುಳವರ್ಮ, ವೈದಾಧಿಕಾರಿ ಡಾ.ಕವಿತಾ, ಸಿಡಿಪಿಓ ಪುಟ್ಟಸ್ವಾಮಿ. ಬಿ.ಪಿ., ಜೋಯ್ಸ್ ದಯಾಳ್ ಬಾಗ್ ಸಂಸ್ಥೆಯ ಆರೋಗ್ಯ ಸಂಯೋಜಕಿ ಜೋಯ್ಸ್, ಬೆಳ್ತಂಗಡಿ ಸಿ.ಎ ಬ್ಯಾಂಕ್ ನಿದರ್ೇಶಕ ಮುನಿರಾಜ ಅಜ್ರಿ , ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಡಾ. ಎ. ಜಯಕುಮಾರ್ ಶೆಟ್ಟಿ , ವಕೀಲರ ಸಂಘದ ಅಧ್ಯಕ್ಷ ಶಶಿಕಿರಣ್ ಜೈನ್, ನಡ ಪಂಚಾಯತು ಸದಸ್ಯರುಗಳಾದ ಅಜಿತ್ ಅರಿಗ, ಹರಿಶ್ಚಂದ್ರ, ಶೋಭ ನಡ, ಪ್ರೌಢಶಾಲಾ ಮುಖ್ಯಶಿಕ್ಷಕಿ ಶಮರ್ಿಳಾ, ರಜತ ಮಹೋತ್ಸವ ಸಮಿತಿ ಅಧ್ಯಕ್ಷ ರಾಜಶೇಖರ ಅಜ್ರಿ, ಸದಸ್ಯ ಆದಾಂ ಸಾಹೇಬ, ನಡ ಹಿರಿಯ ಪ್ರಾಥಾಮಿಕ ಶಾಲೆಯ ಮುಖ್ಯ ಶಿಕ್ಷಕಿ ಕುಸುಮಾವತಿ, ಮುಂಡಾಜೆ ವಲಯದ ಮೇಲ್ವಿಚಾರಕಿ ಕಾವೇರಮ್ಮ ಉಪಸ್ಥಿತರಿದ್ದರು.
ಇಂದಬೆಟ್ಟು ವಲಯದ ಮೇಲ್ವಿಚಾರಕಿ ರತ್ನಾವತಿ ಸ್ವಾಗತಿಸಿದರು. ಕಾರ್ಯಕ್ರಮದ ಬಗ್ಗೆ ಸಹಾಯಕ ಶಿಶು ಅಭಿವೃದ್ಧಿ ಯೋನಾಧಿಕಾರಿ ಕೇಶವ. ಬಿ ಮಾಹಿತಿ ನೀಡಿದರು. ಯತೀಶ್ ಗೌಡ ಕಂಗಿತ್ತಿಲು ಕಾರ್ಯಕ್ರಮ ನಿರ್ವಹಿಸಿ, ಅಂಗನವಾಡಿ ಕಾರ್ಯಕತರ್ೆ ದಮಯಂತಿ ವಂದಿಸಿದರು. ಸುಮಾರು 95 ಬಗೆಯ ಪೌಷ್ಠಿಕತೆಯುಳ್ಳ ತಿಂಡಿಗಳನ್ನು ಪ್ರದಶರ್ಿಸಲಾಯಿತು.

By suddi9

Leave a Reply

Your email address will not be published. Required fields are marked *