ಬಂಟ್ವಾಳ: ತಾಲೂಕಿನ ಬಡಗಕಜೆಕಾರು ಗ್ರಾಮದ ಮಾಡ ಎಂಬಲ್ಲಿ ದಿನಸಿ ಅಂಗಡಿಯೊಂದಕ್ಕೆ ದಾಳಿ ನಡೆಸಿದ ಪುಂಜಾಲಕಟ್ಟೆ ಪೊಲೀಸರು ಮದ್ಯ ಸೇವನೆ ಮಾಡುತ್ತಿರುವುದನ್ನು ಪತ್ತೆಹಚ್ಚಿದ್ದಾರೆ. ಈ ಸಂಬಂಧ ಇಬ್ಬರನ್ನು ಬಂಧಿಸಿರುವ ಪೋಲೀಸರು ಸ್ಥಳದಲ್ಲಿದ್ದ ಮದ್ಯದ ಬಾಟ್ಲಿಯನ್ನು ವಶಪಡಿಸಿದ್ದಾರೆ.
ದಿನಸಿ ಅಂಗಡಿಯ ಬಳಿ ಸಾರ್ವಜನಿಕ ಸ್ಥಳದಲ್ಲಿ ಮಧ್ಯಪಾನ ಮಾಡಲು ಅನುವು ಮಾಡಿಕೊಟ್ಟ ಬಡಗಕಜೆಕಾರು ಗ್ರಾಮದ ಶೋಭಾ( 42), ಮದ್ಯ ಸೇವನೆಗೆ ಬಂದಿದ್ದ ಸಂದೇಶ ಯಾನೆ ಮುನ್ನ( 31) ಬಂಧಿತ ಆರೋಪಿಗಳು ಈ ಬಗ್ಗೆ ಪುಂಜಾಲಕಟ್ಟೆ ಪೋಲಿಸರು ಕೇಸ್ ದಾಖಲಿಸಿ ಮುಂದಿನ ತನಿಖೆ ನಡೆಸುತ್ತಿದ್ದಾರೆ.
