ನಿರಂತರ ವೈದ್ಯಕಿಯ ಸೇವೆಯಲ್ಲಿ ಡಾ॥E K ಸಿದ್ದೀಕ್ ಅಡ್ಡೂರು. ವಿಶ್ವಾಸದಿಂದ ಮುನ್ನುಗ್ಗಿದರೆ ಕಾರ್ಯ ಸಿದ್ಧಿ ಎಂದು ಹಿರಿಯರ ಮಾತಿನಂತೆ ರಾಷ್ಟ್ರೀಯ ಲಾಕ್ ಡೌನ್ ಮಧ್ಯೆ ಪ್ರತಿದಿನ ರಾತ್ರಿ ಹಗಲೆನ್ನದೆ ಪ್ರಮಾಣಿಕವಾಗಿ ಅಡ್ಡೂರು ಹಾಗೂ ಸುತ್ತಮುತ್ತಲಿನ ಗ್ರಾಮದ ರೋಗಿಗಳ ಪಾಲಿನ ಆಶಾಕಿರಣವಾಗಿ ಸರ್ವರನ್ನು ಒಂದೇ ರೀತಿಯಲ್ಲಿ ನೋಡುವ ಮೂಲಕ ಡಾ! ಇ.ಕೆ.ಎ. ಸಿದ್ದೀಕ್ ಅಡ್ಡೂರು ಸರ್ವರಿಗೂ ಹಾಗೂ ವೈದ್ಯ ಲೋಕಕ್ಕೆ ಮಾದರಿಯಾಗಿದ್ದಾರೆ.

ಪರಿಸರದ ಸ್ಥಳೀಯ ಕ್ಲಿನಿಕ್ ಮತ್ತು ಮೆಡಿಕಲ್ ಗಳು ಲಾಕ್ಡೌನ್ ನಂತರ ಮುಚ್ಚಲ್ಪಟ್ಟಿದ್ದರೂ ಡಾ! ಸಿದ್ದೀಕ್ ರವರ ರಿಫಾ ಕ್ಲಿನಿಕ್ ಹಾಗೂ ಮೆಡಿಕಲ್ ನಿರಂತರ ಸೇವೆಯನ್ನು ನೀಡುತ್ತಿದೆ. ಯಾವಾಗ ನೋಡಿದರೂ ರೋಗಿಗಳು ಅಸ್ಪತ್ರೆ ಯಲ್ಲಿ ಕ್ಯೂ ಇದ್ದೇ ಇರುತ್ತಾರೆ.ಜನರಿಗೆ ಅದ್ಬುತ ಆರೋಗ್ಯ ಸೇವೆ ನೀಡುವ ಅಡ್ಡೂರಿನ ಡಾ॥ E K ಸಿದ್ದೀಕ್ ವೈದ್ಯರು!. *Poor are my patients, God pays for them* ಎಂಬ ಉಕ್ತಿಯನ್ನು ತಮ್ಮ ಜೀವನದುದ್ದಕ್ಕೂ ಅಕ್ಷರಶಃ ಪಾಲಿಸಿದ ವ್ಯಕ್ತಿ ಡಾ॥ EK ಸಿದ್ದೀಕ್ ಎಂದರೆ ಅತಿಶಯೋಕ್ತಿಯಲ್ಲ. .ತಾನು ನಂಬಿದ ತತ್ವ, ಆದರ್ಶ ,ಧ್ಯೇಯಗಳನ್ನು ಬಲಿಗೊಡದೆ ವೈದ್ಯಕೀಯ ವೃತ್ತಿಯನ್ನು ಪ್ರಾಮಾಣಿಕವಾಗಿ ಜೀವನದಲ್ಲಿ ಅಳವಡಿಸಿಕೊಂಡು ನುಡಿದಂತೆಯೇ ನಡೆದರು. ಹಲವಾರು ಶಿಕ್ಷಣ ಸಂಸ್ಥೆ, ಬಡ ವಿದ್ಯಾರ್ಥಿಗಳಿಗೆ ಬಡ ರೋಗಿಗಳಿಗೆ ಆಶಾಕಿರಣವಾದರು.
ಈ ನಿಟ್ಟಿನಲ್ಲಿ ನಿಸ್ವಾರ್ಥ ಸೇವಾ ಮನೋಭಾವದಿಂದ ಹಗಲಿರುಳು ತಮ್ಮ ಜೀವನವನ್ನು ರೋಗಿಗಳ ಒಳಿತಿಗಾಗಿ ತೊಡಗಿಸಿಕೊಂಡು ವೈದ್ಯರನ್ನು ಗುರುತಿಸಿ ಗೌರವಿಸುವ ಕಾರ್ಯ ನಡೆಯಬೇಕು. ಕೊನೆಯದಾಗಿ ರೋಗಿಗಳಿಗೂ ಒಂದೆರಡು ಕಿವಿಮಾತು. ದಯವಿಟ್ಟು ತಾಳ್ಮೆ, ಸಂಯಮ ಕಳೆದುಕೊಳ್ಳಬೇಡಿ. ನಿಮ್ಮ ವೈದ್ಯರ ಮೇಲೆ ಪೂರ್ಣ ಭರವಸೆ ಇಡಿ. ನಿಮ್ಮ ಎಲ್ಲಾ ಸಮಸ್ಯೆಗಳನ್ನು ಮುಕ್ತವಾಗಿ ವೈದ್ಯರ ಬಳಿ ತೆರೆದಿಡಿ. ಕೊರೋನಾ ಶಂಕಿತರು ಬಂದಾಗ ಅಪಾಯವೆನಿಸುವುದಿಲ್ಲವೇ ಎಂದು ಕೇಳಿದಾಗ, ‘ ಮಾಸ್ಕ್ ಮತ್ತು ಗ್ಲೌಸ್ ಗಳನ್ನು ಬಳಸುತ್ತೇನೆ. ಅಷ್ಟೇ ಅಲ್ಲದೆ ಸ್ಯಾನಿಟೈಸರ್ ನಿಂದ ಆಗಾಗ ಕೈಗಳನ್ನು ಸ್ವಚ್ಛಗೊಳಿಸುತ್ತಿರುತ್ತೇನೆ ‘ ಎಂದು ಮಂದಹಾಸ ಬೀರಿದರು.
ಗೆಳೆಯರೇ, ನಾವು ಅನಾರೋಗ್ಯದಿಂದ ಹೆಣಗಾಡುತ್ತಿರುವಾಗ ನಮ್ಮ ನೋವು ಶಮನಗೊಳಿಸಿ,ನಮಗೆ ಧೈರ್ಯ ಆತ್ಮವಿಶ್ವಾಸ ತುಂಬುವ ನೆಚ್ಚಿನ ವೈದ್ಯರನ್ನು ಸ್ಮರಿಸುವ ಮತ್ತು ಆದರಿಸುವ., ಒಂದು ಮಾತು ಯಾವತ್ತೂ ನೆನಪಿನಲ್ಲಿಡಿ. ವೈದ್ಯರೂ ಕೂಡಾ ನಿಮ್ಮಂತೆಯೇ ಒಂದು ಜೀವ. ಅವರಿಗೂ ತಮ್ಮಂತೆ ಆದ ಆಸೆ, ಆಕಾಂಕ್ಷೆ, ನೋವು, ನಲಿವು ಭಾವನೆಗಳು ಇರುತ್ತದೆ. ಅವರ ಭಾವನೆಗಳಿಗೂ ಒಂದಷ್ಟು ಗೌರವ ನೀಡೋಣ.
ವರದಿ : M A ಮುಹಮ್ಮದ್ ಕುಂಞ ಮಾಸ್ಟರ್ ಅಡ್ಡೂರು
