ಬಂಟ್ವಾಳ:ವಿಶ್ವ ಮಾನವ ಸಂವಿಧಾನ ಶಿಲ್ಪಿಡಾ. ಬಿ.ಆರ್ ಅಂಬೇಡ್ಕರ್ ಅವರ ಜನ್ಮ ದಿನಾಚರಣೆಯನ್ನು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ಮೂಲಕ ಬಂಟ್ವಾಳ ವಿಧಾನಸಭಾ ಕ್ಷೇತ್ರ ವತಿಯಿಂದ ಬಿ. ಸಿ. ರೋಡಿನಲ್ಲಿರುವ ಕಚೇರಿಯಲ್ಲಿ ಸರಳವಾಗಿ ಆಚರಿಸಲಾಯಿತು.
ದ.ಕ.ಜಿಲ್ಲಾ ಬಿಜೆಪಿ ಪ್ರ.ಕಾರ್ಯದರ್ಶಿ ರಾಮದಾಸ್ ಬಂಟ್ವಾಳ ಅವರು ಡಾ.ಬಿ.ಅರ್. ಅಂಬೇಡ್ಕರ್ ರ ಮುಂದಾಲೊಚನೆಯ ಸಂವಿಧಾನ ರಚನೆಯಿಂದಾಗಿ ದೇಶದ ಒಬ್ಬ ಸಾಮಾನ್ಯ ಪ್ರಜೆ ಕೂಡ ದೇಶದ ಪ್ರಧಾನಿ,ರಾಷ್ಟ್ರಪತಿ ಮುಂತಾದ ಪ್ರಮುಖ ಜವಾಬ್ದಾರಿಯನ್ನು ವಹಿಸಿಕೊಳ್ಳುವಂತಾಗಿದೆ ಎಂದರು. ಕ್ಷೇತ್ರ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ. ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ದೇವದಾಸ್ ಶೆಟ್ಟಿ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಸಂದೇಶ್ ಶೆಟ್ಟಿ,,ಕ್ಷೇತ್ರ ಪ್ರಧಾನಕಾರ್ಯದರ್ಶಿಗಳಾದ ರವೀಶ್ ಶೆಟ್ಟಿ ,ಡೊಂಬಯ ಅರಳ ,ಪಕ್ಷದ ಪ್ರಮುಖರಾದ ಮೋನಪ್ಪ ದೇವಸ್ಯ,ಆನಂದ ಶಂಭೂರು, ಪುರುಷೋತ್ತಮ ಶೆಟ್ಟಿ ಸುದರ್ಶನ್ ಬಜ ಕಾರ್ತಿಕ್ ಬಲ್ಲಾಳ್, ಪ್ರಣಾಮ್,ತಿರುಲೇಶ್,ಕೇಶವ, ಗುರುದತ್ತ್ ,ಗಣೇಶ್, ಸುರೇಶ್ ಮೈರ ಮೊದಲಾದವರು ಉಪಸ್ಥಿತರಿದ್ದರು.
