ಬಂಟ್ವಾಳ:  ವಿವಾದಾತ್ಮಕ ಯುವಕನೊಬ್ಬನಿಗೆ ಡ್ರೋನ್ ಬಳಕೆಗೆ ಅವಕಾಶ ಮಾಡಿಕೊಟ್ಟಿರುವ ಬಂಟ್ವಾಳ ಪೋಲಿಸರ ಕ್ರಮಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿದ್ದು,ಸಾಮಾಜಿಕ ಜಾಲತಾಣದಲ್ಲು ವೈರಲ್ ಆಗಿರುವ ಹಿನ್ನಲೆಯಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರು ಡ್ರೋನ್ ಬಳಕೆಯನ್ನು ತಡೆಹಿಡಿತುವಂತೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಯವರಿಗೆ ಸೂಚಿಸಿದ್ದಾರೆ. IMG_20200330_225207

ಲಾಕ್ ಡೌನ್ ಅವಧಿಯಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ ಅನಗತ್ಯವಾಗಿ ವಾಹನ,ದ್ವಿಚಕ್ರದಲ್ಲಿ ತಿರುಗಾಡುವವರನ್ನು ಮತ್ತು ನಡದಾಡುವ ಜನಗಳನ್ನು ಪತ್ತೆಹಚ್ಚಿ ಕಾನೂನುಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಡ್ರೋನ್ ಕ್ಯಾಮರಾ ಬಳ ಪೋಲಿಸ್ ಇಲಾಖೆ ಮುಂದಾಗಿ,ಶನಿವಾರ ಇದಕ್ಕೆ ಬಿ.ಸಿ.ರೋಡಿನಲ್ಲಿ ಚಾಲನೆ  ನೀಡಿತ್ತು.

ಆದರೆ ಬಂಟ್ವಾಳ ಪೋಲಿಸ್ ಉಪವಿಭಾಗ ವ್ಯಾಪ್ತಿಯಲ್ಲಿ ಡ್ರೋನ್ ಚಿತ್ರೀಕರಣಕ್ಕೆ  ಪೆರಾಜೆ ಗ್ರಾಮದ ವಿವಾದಿತ ಯುವಕನೊಬ್ಬನಿಗೆ  ಅವಕಾಶಕಲ್ಪಿಸಿ ಪೋಲಿಸ್ ಅಧಿಕಾರಿಗಳು ಯಡವಟ್ಟು ಮಾಡಿಕೊಂಡಿದ್ದು,ಅತನ ಭಾವಚಿತ್ರ ಸಹಿತ ಧೃಢೀಕರಣಪತ್ರ ಸಾಮಾಜಿಕ ಜಾಲತಾಣದಲ್ಲಿ ಪ್ರಕಟವಾಗುತ್ತಿದ್ದಂತೆ ಸಾರ್ವಜನಿಕ ವಲಯದಿಂದ ವ್ಯಾಪಕ ಟೀಕೆ,ವಿರೋಧಗಳು ವ್ಯಕ್ತವಾಯಿತಲ್ಲದೆ,ಶಾಸಕರಿಗೂ ಈಬಗ್ಗೆ ದೂರುಗಳ ಸರಮಾಲೆಯೇ ಬರಲಾರಂಬಿಸಿದೆ.

  ಇದಕ್ಕೆ ಸ್ಪಂದಿಸಿದ ಶಾಸಕ ರಾಜೇಶ ನಾಯ್ಕ್ ಅವರು ಡ್ರೋನ್ ಚಿತ್ರೀಕರಣದ ಯುವಕ ಸಿಕ್ಕಿರುವ ಅವಕಾಶವನ್ನು ರ್ದುಬಳಕೆ ಮಾಡಿಕೊಳ್ಳುವ ಸಾಧ್ಯತೆ ಇದೆ ಎಂಬ ದೂರುಗಳು ಬಂದಿದ್ದು, ಹಾಗಾಗಿ ಡ್ರೋನ್ ಚಿತ್ರೀಕರಣವನ್ನು ತಾತ್ಕಾಲಿಕವಾಗಿ ತಡೆ ಹಿಡಿದು,ಈ ಬಗ್ಗೆ ಪುನರ್ ಪರಿಶೀಲಿಸುವಂತೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಯವರಿಗೆ ಸೂಚಿಸಿದ್ದಾರೆ.

By Suddi9

Leave a Reply

Your email address will not be published. Required fields are marked *