ಉಡುಪಿ: ಉಡುಪಿ ನಗರದ ಹೊರ ವಲಯದ ಕಸ್ತೂರ್ಬಾನಗರದ ರೈಲ್ವೆ ಟ್ರ್ಯಾಕ್ ಬಳಿ, ಅಸಹಾಯಕ ಸ್ಥಿತಿಯಲ್ಲಿ ಕಂಡುಬಂದಿರುವ ಅಪರಿಚಿತ ಮಹಿಳೆಯನ್ನು ಗುರುವಾರ ಸಂಜೆ ರಕ್ಷಿಸಲಾಗಿದೆ.
ಕೆಲವು ದಿನಗಳಿಂದ ಅನ್ನ ಆಹಾರ ಸೇವಿಸಲು ಸಿಗದೆ, ಮಹಿಳೆ ನಿತ್ರಾಣಗೊಂಡ ಸ್ಥಿತಿಯಲ್ಲಿ ಕಂಡು ಬಂದಿದ್ದಾಳೆ. ಮಹಿಳೆ ತನ್ನ ಹೆಸರು ಮಾಯ(50 ವ) ಮುಂಬೈ ಎಂದಷ್ಟೇ ಹೇಳಲು ಶಕ್ತಳಾಗಿದ್ದಳು. ಸ್ಥಳಿಯರಿಂದ ಮಾಹಿತಿ ಪಡೆದ ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು, ಕೊರೊನಾ ತುರ್ತು ಪರಿಸ್ಥಿತಿಯಲ್ಲಿ, ಮಹಿಳೆ ಮುಂಬೈ ಮೂಲದವಳೆಂದು ಹೇಳಿಕೊಂಡಿದ್ದರಿಂದ, ಮಹಿಳೆಯನ್ನು ನಗರ ಠಾಣೆಯ ಪೊಲೀಸರ ಮೂಲಕ ವಿಚಾರಣೆ ನೆಡೆಸಿ, ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲುಪಡಿಸಿದ್ದಾರೆ.
ಮಹಿಳೆಯ ವಾರಸುದಾರರು ಉಡುಪಿ ಅಜ್ಜರಕಾಡು ಜಿಲ್ಲಾಸ್ಪತ್ರೆಯ ನಾಗರಿಕ ಸಹಾಯ ಕೇಂದ್ರ ಸಂಪರ್ಕಿಸುವಂತೆ ಹಾಗೂ ಮಹಿಳಾ ಸಹಾಯವಾಣಿ ಕೇಂದ್ರದವರು ನೊಂದ ಮಹಿಳೆಯ ಅಳಲಿಗೆ ಸ್ಪಂದಿಸಬೇಕೆಂದು ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ವಿನಂತಿಸಿದ್ದಾರೆ.
