ಬಂಟ್ವಾಳ: ಕಳ್ಳಿಗೆ ಗ್ರಾಮದ ಬೆಂಜನಪದವು ನಿವಾಸಿ ರಮಾನಂದ ಶೆಟ್ಟಿ ಹಾಗೂ ವಿಜಯಲಕ್ಷ್ಮೀ ದಂಪತಿಯ ಪುತ್ರಿ ಅನಿಶಾ ಶೆಟ್ಟಿ ತನ್ನ ಹುಟ್ಟುಹಬ್ಬವನ್ನು ಬಡಕುಟುಂಬಕ್ಕೆ ಅಕ್ಕಿಯನ್ನು ದಾನವಾಗಿ ನೀಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಿಕೊಂಡರು.
ಪ್ರಥಮವಾಗಿ ಭಾರತಮಾತೆಗೆ ದೀಪ ಪ್ರಜ್ವಲಿಸಿ, ಪುಷ್ಪಾರ್ಚನೆಗೈದು ಪ್ರಾರ್ಥಿಸಲಾಯಿತು. ಬಳಿಕ 60 ಮಂದಿ ಬಡವರಿಗೆ ತಲಾ 10 ಕೆಜಿ ಅಕ್ಕಿ ,2 ತೆಂಗಿನಕಾಯಿ ನೀಡುವ ಮೂಲಕ ಈ ಸಂಕಷ್ಟದ ಪರಿಸ್ಥಿತಿಯಲ್ಲಿ ಸಾಮಾಜಿಕ ಕಳಕಳಿ ಮೆರೆದಿದ್ದಾರೆ. ಆಕೆಯ ಈ ಸೇವೆಗೆ ಕಳ್ಳಿಗೆ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದಾರೆ.
