ಬಂಟ್ವಾಳ: ಸ್ನಾನ ಮಾಡಲೆಂದು ಪಲ್ಗುಣಿ ನದಿಗಿಳಿದ ವೃದ್ದರೋರ್ವರು ಕಾಲು ಜಾರಿ ಬಿದ್ದು ಮೃತ ಪಟ್ಟ ಘಟನೆ ಬಂಟ್ವಾಳ ತಾಲೂಕಿನ ಭಂಡಶಾಲೆ ಎಂಬಲ್ಲಿ ಶುಕ್ರವಾರ   ನಡೆದಿದೆ.
ಅರಳ ಗ್ರಾಮದ ತಡ್ಯಾಳ ನಿವಾಸಿ ತಿಮ್ಮಪ್ಪ ಪೂಜಾರಿ (70) ಮೃತಪಟ್ಟವರಾಗಿದ್ದಾರೆ‌.

ಅವರು ತನ್ನ ಮೊಮ್ಮಗ ನಿತಿನ್  ಜೊತೆ  ಪಲ್ಗುಣಿ ನದಿಗೆ  ಸ್ನಾನಕ್ಕೆಂದು ಹೋಗಿದ್ದರು.ನೀರಿಗೆ ಇಳಿದ ಅವರು ಕಾಲು ಜಾರಿ ನೀರಿನಲ್ಲಿ ಮುಳುಗಿದ್ದಾರೆ ಎಂದು ಮೊಮ್ಮಗ  ಮನೆಗೆ  ಬಂದು ತಿಳಿಸಿದ್ದಾನೆ. ಮನೆಯವರು ಸ್ಥಳಕ್ಕಾಗಮಿಸಿ ಈಜುಗಾರರ ಮೂಲಕ   ಮೃತ ದೇಹ ಪತ್ತೆ ಹಚ್ಚಿ ಮೇಲಕ್ಕೆತ್ತಿದ್ದಾರೆ.ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣಾ  ಪೋಲೀಸರು ಪ್ರಕರಣ ದಾಖಲಿಸಿದ್ದಾರೆ

By suddi9

Leave a Reply

Your email address will not be published. Required fields are marked *