ಬಂಟ್ವಾಳ: ಅಜ್ಮೀರ ಪ್ರವಾಸಕ್ಕೆ ತೆರಳಿ ಅಲ್ಲಿಂದ ಬಳಿಕ ದೆಹಲಿಗೆ ತೆರಳಿ ವಾಪಾಸು ಆದ ಬಂಟ್ವಾಳ  : ಅಜ್ಮೀರ್ ಪ್ರವಾಸ ಮುಗಿಸಿ ಊರಿಗೆ ಮರಳಿದ್ದ ಬಂಟ್ವಾಳ ತಾಲೂಕಿನ ಕೊಳಕೆ ಮೂಲದ ೯ ಮಂದಿಯನ್ನು ಮುಂಜಾಗ್ರತಾ ಕ್ರಮವಾಗಿ ತಪಾಸಣೆಯ ದೃಷ್ಟಿಯಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದೆ. ಮಾ.17ರಂದು  ಅವರು ಊರಿಗೆ ಮರಳಿದ್ದು, ಎಲ್ಲರೂ ಆರೋಗ್ಯವಾಗಿದ್ದಾರೆ. ಕೇವಲ ಮುಂಜಾಗ್ರತೆಯಾಗಿ ಅವರ ಆರೋಗ್ಯ ತಪಾಸಣೆ ನಡೆಸಲಾಗುತ್ತದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಅಜ್ಮೀರ್ ಬಳಿಕ ದೆಹಲಿಯ ನಿಜಾಮುದ್ದೀನ್ ರೈಲ್ವೆ ಸ್ಟೇಷನ್ ಹೋಗಿದ್ದರಾದರೂಅವರು ನಿಜಾಮ್ಮುದ್ದೀನ್ ಧಾರ್ಮಿಕ ಕಾರ್ಯಕ್ರಮದಲ್ಲಿ ಅವರು ಭಾಗಿಯಾಗಿರಲಿಲ್ಲ ಎಂದು ಪೊಲೀಸರ ತನಿಖೆಯ ವೇಳೆ ಖಚಿತಪಟ್ಟಿದೆ.

ಊರಿಗೆ ಮರಳಿದ ಬಳಿಕ ಹೋಂ ಕ್ವಾರಂಟೈನ್ ನಲ್ಲಿಯು ಇರಲಿಲ್ಲ ಹಾಗಾಗಿ ಹೆಚ್ಚಿನ ಮುಂಜಾಗ್ರತಾ ಕ್ರಮವಾಗಿ ಇವರೆಲ್ಲರನ್ನು ಪರೀಕ್ಷೆಗೊಳಪಡಿಸುವ ನಿಟ್ಟಿನಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸ್ ಇಲಾಖಾ ಮೂಲಗಳು ತಿಳಿಸಿದೆ.

 

By suddi9

Leave a Reply

Your email address will not be published. Required fields are marked *