ಬಂಟ್ವಾಳ:  ಕೊರೋನ ಭೀಕರತೆಯಿಂದ ಅಸ್ತವ್ಯಸ್ತಗೊಂಡ ಬಂಟ್ವಾಳ ತಾಲೂಕಿನಲ್ಲಿ ಜನಜೀವನ ಸುವ್ಯವಸ್ಥೆಗೆ ತರುವ ನಿಟ್ಟಿನಲ್ಲಿ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪಾಡಿ ಅವರು ವಿಷೇಶ ಮುತುವರ್ಜಿ ವಹಿಸಿದ್ದಾರೆ.  ತಾಲೂಕಿನ ಯಾವುದೇ ಬಾಗದಲ್ಲಿ ಜನಸಾಮಾನ್ಯರಿಗೆ ಪಡಿತರ ಸಾಮಗ್ರಿಗಳ ನಿತ್ಯೊಪಯೋಗಿ  ವಸ್ತುಗಳು, ಔಷಧೀಯ ಸಾಮಗ್ರಿಗಳ  ಕೊರತೆಯಾದ ತಕ್ಷಣದಲ್ಲಿ‌ ಶಾಸಕರ ಸಹಾಯವಾಣಿಯನ್ನು‌ ಸಂಪರ್ಕಿಸಿದಾ ಕ್ಷಣದಲ್ಲೇ ಅಯಾ ಗ್ರಾಮದ ಪ್ರಮುಖರನ್ನು ಸಂಪರ್ಕಿಸಿ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದೆ.IMG-20200401-WA0103

ತಾಲೂಕಿನ ಸಂಗಬೆಟ್ಟು ಗ್ರಾಮದ ವ್ಯಾಪ್ತಿಯಲ್ಲಿ ಉಚಿತ ಮಾಸ್ಕ್ ಹಂಚಲಾಗಿದ್ದು, ಕೊಳ್ನಾಡು, ಸರಪಾಡಿ,ಅಮ್ಮುಂಜೆ,ಕರಿಯಂಗಳ ಮೊದಲಾದ ಗ್ರಾಮಗಳಲ್ಲಿ ಬಡ ಕುಟುಂಬಗಳಿಗೆ ಸ್ಥಳೀಯ ಬಿಜೆಪಿ ಕಾರ್ಯಕರ್ತರ ಮೂಲಕ ದಿನನಿತ್ಯದ ಜೀವನಾವಶ್ಯಕ ವಸ್ತುಗಳನ್ನು ವಿತರಿಸಿದ್ದಾರೆ.ಅಯಾ ಗ್ರಾಮ ಮಟ್ಟದಲ್ಲಿ ಜನರ ಸಂಕಷ್ಟಗಳಿಗೆ ಸ್ಪಂದಿಸುವಂತೆ ಶಾಸಕರ ಸಹಾಯವಾಣಿ ಕಾರ್ಯನಿರ್ವಹಿಸುತ್ತಿದ್ದು, ವ್ಯಾಪಕ ಪ್ರಶಂಸೆಯು ವ್ಯಕ್ತವಾಗಿದೆ.
IMG-20200401-WA0099
ಅನೇಕ ಕಡೆಗಳಲ್ಲಿ ಶಾಸಕರ ಸೂಚನೆಯಂತೆ ಯುವಮೊರ್ಚಾ  ಸಂಘಟನೆಯ ಕಾರ್ಯಕರ್ತರು ,ದೇವಸ್ಥಾನಗಳ ಅಡಳಿತ ಮಂಡಳಿ ತಮ್ಮ ಗ್ರಾಮದ ಜನಸಾಮಾನ್ಯರ  ಸಮಸ್ಯೆಗಳ ನಿವಾರಣೆಗೆ ಪಣ ತೊಟ್ಟಿರುದು ಕೊರೊನ ಅಸ್ತವ್ಯಸ್ತತೆ ಯನ್ನು ಸುವ್ಯವಸ್ಥೆಯತ್ತ ತರಲು ಶ್ರಮವಹಿಸುತ್ತಿದ್ದಾರೆ

By suddi9

Leave a Reply

Your email address will not be published. Required fields are marked *