ಕೈಕಂಬ: ಗಂಜಿಮಠ ಸಮೀಪದ ಕೈಗಾರಿಕೆಯೊಂದರ ಕಾರ್ಮಿಕರಲ್ಲಿ ಕೆಲವರಿಗೆ ಕೊರೊನಾ ವೈರಸ್ ಕಂಡು ಬಂದಿದೆ ಎಂಬ ವದಂತಿಯೊಂದು ಕಳೆದೆರಡು ದಿನಗಳಿಂದ ಗುರುಪುರ ಕೈಕಂಬ, ಗಂಜಿಮಠ , ಅಡ್ಡೂರು ಸುತ್ತಮುತ್ತ ಹರಡಿದ್ದು, ಇದು ಸುಳ್ಳು ಸುದ್ದಿಯೆಂದು ತಿಳಿದು ಬಂದಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಗಂಜಿಮಠ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಸನಬ್ಬ ಅವರು ಗಂಜಿಮಠ ಕೈಗಾರಿಕಾ ವಲಯದಲ್ಲಿರುವ ಕೈಗಾರಿಕೆಗಳಲ್ಲಿ ಸರಕಾರದ ನಿರ್ದೇಶನದ ಅನುಸಾರ ಕೊರೊನಾ ವೈರಸ್ ಕುರಿತು ಕಟ್ಟುನಿಟ್ಟಿನ ತಪಾಸಣೆ ನಡೆಸಲಾಗುತ್ತಿದೆ.
ಈ ವೇಳೆ ಇಬ್ಬರಿಗೆ ಜ್ವರದ ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಅವರನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ಹುಚ್ಚಿನ ತಪಾಸಣೆ ನಡೆಸಲಾಗಿದ್ದು ನೆಗೆಟಿವ್ ಫಲಿತಾಂಶ ಕಂಡು ಬಂದಿದೆ, ಆದುದರಿಂದ ವದಂತಿಯಲ್ಲಿ ಸತ್ಯಾಂಶವಿಲ್ಲ ಈ ಬಗ್ಗೆ ನಿಗಾವಿರಿಸಲಾಗಿದೆ ಎಂದು ತಿಳಿಸಿದ್ದಾರೆ.
ವಾರದ ಸಂತೆ ಅಭಾದಿತ: ಬಜಪೆ ಪಂಚಾಯತ್ ವ್ಯಾಪ್ತಿಯಲ್ಲಿ ನೊವೆಲ್ ಕೊರೊನಾಗೆ ಸಂಭಂದಪಟ್ಟಂತೆ ಇದುವರೆಗೆ ಯಾವುದೇ ಪ್ರಕರಣಗಳು ಕಂಡು ಬಂದಿಲ್ಲ, ಪರಿಸ್ಥಿಯ ಬಗ್ಗೆ ನಿಗಾವಿರಿಸಲಾಗಿದೆ, ಬಜಪೆಯಲ್ಲಿ ಆದಿತ್ಯವಾರ ಮತ್ತು ಸೋಮವಾರ ನಡೆಯುವ ವಾರದ ಸಂತೆಯನ್ನು ನಿಷೇಧಿಸುವ ಬಗ್ಗೆ ತೀರ್ಮಾನಿಸಿಲ್ಲ, ಸಂತೆಗಳನ್ನು ನಿಷೇಧಿಸಿದರೆ ಜನರಲ್ಲಿ ಗೊಂದಲ ಉಂಟಾಗುವ ಸಾಧ್ಯತೆ ಇದೆ.ಅಗತ್ಯ ಕಂಡುಬಂದರೆ ಪಂಚಾಯತ್ ಸಭೆಯಲ್ಲಿ ಚರ್ಚಿಸಿ ನಿರ್ಧರಿಸಲಾಗುವುದು ಎಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಾಯಿಷ್ ಚೌಟ ತಿಳಿಸಿದ್ದಾರೆ.
ಗಂಜಿಮಠದಲ್ಲಿ ಗುರುವಾರ ನಡೆಯುವ ವಾರದ ಸಂತೆಯನ್ನು ನಿಷೇಧಿಸುವ ಯಾವುದೇ ನಿರ್ಧಾರ ಕೈಗೊಂಡಿಲ್ಲ, ಸಾರ್ವಜನಿಕರಿ ಕೊರೊನ ಬಗ್ಗೆ ತೆಗೆದುಕೊಳ್ಳಬೇಕಾ ಮುಂಜಾಗ್ರತಾ ಕ್ರಮಗಳ ಬಗ್ಗೆ ವಯಕ್ತಿಕವಾಗಿ ಮಾಹಿತಿ ನೀಡಲಾಗುತ್ತಿದೆ, ಶೀಘ್ರದಲ್ಲಿ ವೈದ್ಯಾಧಿಕಾರಿಗಳ ಜತೆಯಲ್ಲಿ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪಂಚಾಯತಿ ಉಪಾಧ್ಯಕ್ಷ ಆರ್ ಎಸ್ ಜಾಕೀರ್ ತಿಳಿಸಿದ್ದಾರೆ.
