ಪೊಳಲಿ: ಕೊರೊನಾ ವೈರಾಣು ಕಾಯಿಲೆ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಜರಗುವ ಎಲ್ಲಾ ಧಾರ್ಮಿಕ ಕೇಂದ್ರಗಳಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಧಿಕಾರಿಯ ಆದೇಶದಂತೆ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ನಡೆಯುವ ಉತ್ಸವಕ್ಕೆ ಮುಂದಿನ ಪ್ರಕಟನೆಯ ತನಕ ಭಕ್ತಾಧಿಗಳಿಗೆ ಪ್ರವೇಶ ನಿರ್ಬಂಧ ವಿಧಿಸಿದೆ.
ದೇವಸ್ಥಾನದಲ್ಲಿ ಕೇವಲ ಶ್ರೀ ದೇವರ ದರ್ಶನ ಮಾತ್ರ ಭಕ್ತರಿಗೆ ಲಭಿಸಲಿದೆ. ಉಳಿದ ಯಾವುದೇ ಸೇವೆಗಳು ಮುಂದಿನ ಆದೇಶದವರೆಗೆ ರದ್ದು ಪಡಿಸಿದೆ. ದೇವಸ್ಥಾನದಲ್ಲಿ ನಡೆಯುವ ಉತ್ಸವಗಳಲ್ಲಿ ದೇವಳದ ಸಿಬ್ಬಂದಿಗಳು ಮಾತ್ರ ಭಗವಹಿಸುವ ಅವಕಾಶವಿದೆ ಎಂದು ಆಡಳಿತ ಮಂಡಳಿ ಹಾಗೂ ದೇವಳದ ಕಾರ್ಯನಿರ್ವಹಣಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
