ಕೈಕಂಬ: ಫಲ್ಗುಣಿ ಯುವಕ ಮಂಡಲ(ರಿ) ಇರುವೈಲು ಇದರ 32 ನೆ ವರ್ಷದ ವಾರ್ಷಿಕೋತ್ಸವ ಸಮಾರಂಭವು ಇತ್ತೀಚೆಗೆ ಇರುವೈಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ವಠಾರದಲ್ಲಿ ಜರಗಿತು. ಧಾರ್ಮಿಕ ಉಪನ್ಯಾಸಕರಾಗಿ ಭಾಗವಹಿಸಿ ಮಾತನಾಡಿದ ಜನ್ಮಭೂಮಿ ಸ್ವಸಹಾಯ ಸೌಹಾರ್ದ ಸಹಕಾರಿಯ ಯೋಜನಾಧಿಕಾರಿ ಜಿತೇಂದ್ರ ಪ್ರತಾಪ್ ನಗರ ವಿಶ್ವದ ಯಾವುದೇ ಸಂಸ್ಕ್ರತಿಗಿಂತ ನಮ್ಮ ಸಂಸ್ಕ್ರತಿ ಶ್ರೇಷ್ಠವಾದುದು, ನಮ್ಮ ಹಿರಿಯರು ಅಳವಡಿಸಿಕೊಂಡ ಆಚಾರ ವಿಚಾರಗಳು ಬರಿ ಮೂಢನಂಬಿಕೆಗಳಲ್ಲ, ನಮ್ಮ ಆಚರಣೆಗಳ ಹಿಂದೆ ವೈಜ್ಞಾನಿಕ ಕಾರಣಗಳಿರುವುದು ಸಾಬೀತಾಗಿದೆ.
ಕೈಗೆ ಬಲೆ, ಹಣೆಗೆ ಕುಂಕುಮದ ತಿಲಕ ಇಡುವುದರ ಹಿಂದೆ ಆರೋಗ್ಯ ರಕ್ಷಣೆಯ ರಹಷ್ಯ ಅಡಗಿದೆ, ಆದರೆ ಇಂದು ನಾವು ಪಾಶಾತ್ಯ ಸಂಸ್ಕ್ರತಿಗೆ ಮರುಳಾಗಿ ನಮ್ಮ ಸಂಸ್ಕ್ರತಿಯನ್ನು ಮರೆಯುತ್ತಿದ್ದೇವೆ ಎಂದರು. ಮೂಡಬಿದ್ರಿ ಉಪವಲಯದ ಅರಣ್ಯ ಸಂರಕ್ಷಣಾಧಿಕಾರಿ ಅಶ್ವಿತ್ ಗಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಶತಾಯುಷಿ ಕಲ್ಯಾಣಿ ನಾಯ್ಕ್ ಕುತ್ಯಾಡಿ ಅವರನ್ನು ವೇದಿಕೆಯಲ್ಲಿ ಶಾಲು ಹೊದೆಸಿ ಫಲಪುಷ್ಪ ನೀಡಿ ಗೌರವಿಸಲಾಯಿತು. ಮಂಗಳೂರಿನ ಉದ್ಯಮಿ ಅಶ್ವಥ್ ಹೆಗ್ಡೆ ಬಹುಮಾನ ವಿತರಿಸಿದರು. ಮೂಡಬಿದ್ರಿಯ ಉದ್ಯಮಿ ಮನೋಹರ್ ಕುಟಿನ್ನ, ನೆಹರು ಯುವ ಕೇಂದ್ರದ ಮೂಡಬಿದ್ರಿ ತಾಲೂಕು ಪ್ರತಿನಿಧಿ ಕು|ಸುಶ್ಮಿತಾ ಬಿ. ಆರ್. ,ಯುವಕ ಮಂಡಲದ ಪದಾಧಿಕಾರಿಗಳು ಮತ್ತು ಸದಸ್ಯರು ಮುಂತಾದವರು ಉಪಸ್ಥಿತರಿದ್ದರು. ಯುವಕ ಮಂಡಲದ ಅಧ್ಯಕ್ಷ ಪ್ರಶಾಂತ್ ಸಫಲಿಗ ಸ್ವಾಗತಿಸಿದರು, ಕಾರ್ಯದರ್ಶಿ ಧನಂಜಯ ಶೆಟ್ಟಿ ಬರ್ಕೆ ವರದಿ ವಾಚಿಸಿದರು, ಬೊಂಡಾಲ ಪ್ರಸಾದ್ ಶೆಟ್ಟಿ ನಿರೂಪಿಸಿ, ಕೋಶಾಧಿಕಾರಿ ಶಿವಾನಂದ ನಾಯ್ಕ್ ವಂದಿಸಿದರು. ನಂತರ ಸ್ಥಳೀಯ ಶಾಲಾ ವಿದ್ಯಾರ್ಥಿಗಳಿಂದ ನ್ರತ್ಯ ವೈವಿಧ್ಯ ಮತ್ತು ಮಂಜೇಶ್ವರ ಶಾರದಾ ಆರ್ಟ್ಸ್ ತಂಡದವರಿಂದ ಗಿರ್ ಗಿಟ್ ಗಿರಿಧರೆ ಎಂಬ ನಾಟಕ ಪ್ರದರ್ಶನ ನಡೆಯಿತು.
