ಬಂಟ್ವಾಳ: ಮುಖ್ಯ ಶಿಕ್ಷಕರ ವರ್ಗಾವಣೆಯನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಕಾವಳಕಟ್ಟೆ ಸರಕಾರಿ ಉರ್ದು ಹಿ.ಪ್ರಾ.ಶಾಲೆಯ ವಿದ್ಯಾರ್ಥಿಗಳು ಹಾಗೂ ಪೋಷಕರು ಶುಕ್ರವಾರ ಬೆಳಿಗ್ಗೆ ಧರಣಿ ನಡೆಸಿದರು. ಶಾಲಾಪೋಷಕರು,ಶಾಲಾಭಿವೃದ್ದಿ ಸಮಿತಿಯ ನೇತೃತ್ವದಲ್ಲಿ ಶಾಲಾ ಮುಂಭಾಗದಲ್ಲಿ ಧರಣಿ ನಡೆಸಿದ್ದು,ಈ ಸಂದರ್ಭ ವಿದ್ಯಾರ್ಥಿಗಳು ಕೂಡ ತರಗತಿ ಬಹಿಷ್ಕರಿಸಿ ಧರಣಿಯಲ್ಲಿ ಪಾಲ್ಗೊಂಡರು.
IMG-20200306-WA0059
ಮುಖ್ಯಶಿಕ್ಷಕ ಹಸನ್ ಸಾದ್  ಬಾಗ್ವಾನ್ ಪರವಾಗಿ ಘೋಷಣೆ ಕೂಗಿದ ವಿದ್ಯಾರ್ಥಿಗಳು ಅವರ ವರ್ಗಾವಣೆಯನ್ನು ರದ್ದುಗೊಳಿಸುವಂತೆ ಆಗ್ರಹಿಸಿದರು.ಕೆಲದಿನಗಳ ಹಿಂದೆ ಶಾಲಾ ಮುಖ್ಯಶಿಕ್ಷಕ ಹಸನ್ ಸಾದ್ ಬಾಗ್ವಾನ್ ಅವರನ್ನು ವರ್ಗಾವಣೆಗೊಳಿಸಿ ಆದೇಶಿಸಲಾಗಿತ್ತು.ಇವರ ವರ್ಗಾವಣೆಗೆ ಶಾಲಾ ಪೋಷಕರು ಹಾಗೂ ವಿದ್ಯಾರ್ಥಿಗಳು ವಿರೋಧ ವ್ಯಕ್ತಪಡಿಸಿದ್ದು,ಈ ಹಿನ್ನಲೆಯಲ್ಲಿ ಧರಣಿ ನಡೆಸಲಾಗಿತ್ತು.ಬಳಿಕ ಪ್ರತಿಭಟನಾಕಾರರು ಜಿಪಂ ಸದಸ್ಯ ಪದ್ಮಶೇಖರ ಜೈನ್ ಅವರ ನೇತೃತ್ವದಲ್ಲಿ ಕ್ಷೇತ್ರ ಶಿಕ್ಷಣ ಸಮನ್ವಯ ಅಧಿಕಾರಿ ರಾಧಾಕೃಷ್ಣ ಭಟ್ ಅವರ ಮುಇಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.
IMG-20200306-WA0060

By Suddi9

Leave a Reply

Your email address will not be published. Required fields are marked *