ಕೈಕಂಬ:ಶ್ರೀ ಸತ್ಯಸಾರಮಾನಿ ಕ್ಷೇತ್ರ ,ಡಾ|ಅಂಬೇಡ್ಕರ್ ನಗರ ಮುತ್ತೂರು,ಕುಳವೂರು ಮಂಗಳೂರು ತಾಲ್ಲೂಕು ಇದರ ಹತ್ತರ ಸಂಭ್ರಮದ ಪ್ರಯುಕ್ತ ದಲಿತ ಪಾರಂಪರಿಕ ಮತ್ತು ಸಾಂಪ್ರದಾಯಿಕ ಉಚಿತ ಸಾಮೂಹಿಕ ವಿವಾಹ ಇಂದು(4-03-2020 ರ ಬುಧವಾರ)ಜರಗಲಿದೆ,ಪ್ರಾತಃ ಕಾಲ 6 ಗಂಟೆಗೆ ಸ್ಥಳ ಶುದ್ದಿ, ಕ್ಷೇತ್ರದ ಸರ್ವಶಕ್ತಿಗಳಿಗೆ ಪರ್ವ ಸೇವೆ,ನಡೆದ ನಂತರ 11-40 ರ ಶುಭ ಮುಹೂರ್ತದಲ್ಲಿ ಕ್ಷೇತ್ರದ ಪ್ರಧಾನ ಅರ್ಚಕ ಹರಿಯಪ್ಪ ಮುತ್ತೂರು ಅವರ ನೇತೃತ್ವದಲ್ಲಿ ದಲಿತ ಪಾರಂಪರಿಕ ಹಾಗೂ ಸಾಂಪ್ರದಾಯಿಕ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಲಿದೆ.
ಬೆಳಿಗ್ಗೆ 10 ಗಂಟೆಗೆ ಹರಿಯಪ್ಪ ಮುತ್ತೂರು ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭಾ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಅವರು ಉದ್ಘಾಟಿಸಲಿದ್ದಾರೆ,ಸಂಸದ ನಳಿನ್ ಕುಮಾರ್ ಕಟೀಲು,ಶಾಸಕರಾದ ಡಾ |ಭರತ್ ಶೆಟ್ಟಿ,ರಾಜೇಶ್ ನಾಯ್ಕ್ ಉಳಿಪಾಡಿಗುತ್ತು, ಯು.ಟಿ.ಖಾದರ್ ,ಯಸ್.ಅಂಗಾರ,ಮಾಜಿ ಸಚಿವರಾದ ರಮಾನಾಥ ರೈ ,ಕೃಷ್ಣ ಪಾಲೆಮಾರ್ ,ಮಾಜಿ ಶಾಸಕ ಮೊಯಿದ್ದೀನ್ ಬಾವ ಸೇರಿದಂತೆ ಸಮಾಜದ ವಿವಿಧ ಗಣ್ಯರು ,ಮುಖಂಡರುಗಳು ಭಾಗವಹಿಸಲಿದ್ದಾರೆ. ಇದೆ ವೇಳೆ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.ಮಧ್ಯಾಹ್ನ ಗಂಟೆ 1 ರಿಂದ ವಿವಾಹದ ಔತಣ ಸತ್ಕಾರ ಹಾಗೂ 4 ಗಂಟೆಯಿಂದ ಪ್ರಶಾಂತ್ ಕಂಕನಾಡಿ ಮತ್ತು ಬಳಗದವರಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಲಿದೆ .ದಿನಾಂಕ 5 ರ ಗುರುವಾರ ಸಂಜೆ 4 ಗಂಟೆಯಿಂದ ಚಲನಚಿತ್ರ ನಟ ,ಬಲೇ ತೆಲಿಪಾಲೆ ಖ್ಯಾತಿಯ ಉಮೇಶ್ ಮಿಜಾರ್ ಸಾರಥ್ಯದಲ್ಲಿ ತೆಲಿಕೆದ ಗೊಂಚಿಲ್ ,ಸಂಜೆ 7 ರಿಂದ ತಾಳ -ಮೇಳ ನ್ರತ್ಯ ವೈಭವ ಜರಗಲಿದೆ.

By suddi9

Leave a Reply

Your email address will not be published. Required fields are marked *