ಸಂವಿಧಾನವೆಂದರೆದೇಶದ ನಿಯಮ ಸಂಹಿತೆಯಾಗಿದೆ.ನಮ್ಮ ಭಾರತದ ಸಂವಿಧಾನರಚನೆಗಾಗಿಅದರ ಶಿಲ್ಪಿ ಡಾ| ಬಿ.ಆರ್.ಅಂಬೇಡ್ಕರ್‍ಅವರುಜಾಗತಿಕ ಮಟ್ಟದಲ್ಲಿ ಬೇರೆ ಬೇರೆ ಸಂವಿಧಾನಗಳನ್ನು ಅಧ್ಯಯನ ಮಾಡಿ, ಭಾರತದ ಸಂವಿಧಾನದಕರಡು ಸಮಿತಿಯಅಧ್ಯಕ್ಷರಾಗಿಒಂದು ಸುಧೀರ್ಘವಾದಅತ್ಯುತ್ತಮ ಸಂವಿಧಾನವನ್ನುಕೊಡುಗೆಯನ್ನಾಗಿಕೊಟ್ಟಿರುವರು.ಪ್ರಜಾಪ್ರಭುತ್ವ, ಸ್ವಾತಂತ್ರ್ಯ, ಹಕ್ಕು, ಕರ್ತವ್ಯ ಇತ್ಯಾದಿಗಳ ಬಗ್ಗೆ ಬಹಳ ಸ್ಪಷ್ಟವಾಗಿ ಹೇಳಲಾಗಿರುವ ಸಂವಿಧಾನದಅಡಿಯಲ್ಲೇದೇಶದಜನತೆ ನಡೆಯಬೇಕಾಗಿರುವುದರಿಂದ ಪ್ರತಿಯೊಬ್ಬರೂಅದನ್ನು ಅರಿತುಕೊಳ್ಳಬೇಕಾಗಿದೆ.ವಿದ್ಯಾರ್ಥಿಗಳಂತೂ ಸಂವಿಧಾನವನ್ನುಕಲಿತು ತಿಳಿದುಕೊಳ್ಳುವುದರೊಂದಿಗೆ ದಿನನಿತ್ಯ ಪತ್ರಿಕೆಗಳ ಓದು-ಹಕ್ಕು ಜವಾಬ್ದಾರಿಗಳನ್ನು ಅರಿತು ಮುನ್ನಡೆಯಬೇಕುಎಂಬುದಾಗಿ ಬಂಟ್ವಾಳ ವಿಭಾಗದ ಎಎಸ್ಪಿ ರಂಜಿತ್‍ಕುಮಾರ್ ಹೇಳಿದರು.

ಅವರುದಕ್ಷಿಣಕನ್ನಡಜಿಲ್ಲಾ ಪೊಲೀಸ್ ಇಲಾಖೆ ಮತ್ತುತುಂಬೆ ಪದವಿ ಪೂರ್ವಕಾಲೇಜುಜಂಟಿಯಗಿ ಏರ್ಪಡಿಸಿದ್ದ ಸಂವಿಧಾನ ದಿನ ಜಾಗೃತಿಕಾರ್ಯಗಾರದಲ್ಲಿ ಮಾತನಾಡಿದರು.ಇದೇ ಸಂದರ್ಭದಲ್ಲಿ ಸಂವಿಧಾನಕತೃಡಾ| ಬಿ.ಆರ್.ಅಂಬೇಡ್ಕರ್‍ಅವರ ಪುಸ್ತಕ ನೀಡುವ ಮೂಲಕ ಎಎಸ್ಪಿ ರಂಜಿತ್‍ಕುಮಾರ್‍ಅವರನ್ನುಗೌರವಿಸಲಾಯಿತು.ಮುಹಿಯುದ್ದೀನ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದಡಾ| ಬಿ.ಅಹ್ಮದ್ ಹಾಜಿ ಮುಹಿಯುದ್ದೀನ್‍ಅವರು ಸಮಾರಂಭದಅಧ್ಯಕ್ಷತೆ ವಹಿಸಿದ್ದರು.ಕಾರ್ಯಕ್ರಮದಲ್ಲಿ ಮೊದಲಿಗೆತುಂಬೆಕಾಲೇಜಿನ ಪ್ರಾಂಶುಪಾಲರಾದ ಶ್ರೀ ಕೆ.ಎನ್. ಗಂಗಾಧರ ಆಳ್ವ ಸ್ವಾಗತಿಸ ಪ್ರಸ್ತಾವನೆಗೈದರು.ಕಛೇರಿಅಧೀಕ್ಷಕಅಬ್ದುಲ್‍ಕಬೀರ್ ಮುಂತಾದವರು ಉಪಸ್ಥಿತರಿದ್ದ ಕಾರ್ಯಕ್ರಮದಲ್ಲಿಉಪನ್ಯಾಸಕಅಬ್ದುಲ್‍ರಹಿಮಾನ್ ಡಿ.ಬಿ. ವಂದಿಸಿ, ಉಪನ್ಯಾಸಕಿಕವಿತಾ ಕೆ. ನಿರೂಪಿಸಿದರು.
