ಬಂಟ್ವಾಳ:   ಮಾಜಿ  ಸಚಿವರಾದ  ಬಿ. ರಮನಾಥ ರೈ ರವರು ಪರಿಶ್ರಮದಿಂದ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ  ಸುಮಾರು 5 ಕೋಟಿ ರೂ. ಅನುದಾನದಲ್ಲಿ ಬಂಟ್ವಾಳದಲ್ಲಿ ನಿರ್ಮಾಣ ಹಂತದಲ್ಲಿರುವ ಪಂಜೆ ಮಂಗೇಶರಾಯ ಸಭಾ ಭವನದ ಕಾಮಗಾರಿಯನ್ನು ಪಂಜೆ ಮಂಗೇಶರಾಯ     ಅವರ ಕುಟುಂಬಸ್ಥರು ಪರಿಶೀಲಿಸಿದರು.
IMG-20200302-WA0022ಪಂಜೆ ಮಂಗೇಶರಾಯರ  ಮೊಮ್ಮಗಳಾದ   ಉಷಾ ಅರೋರ್ ಹಾಗೂ ಅವರ ಪತಿಯ ಪ್ರಕಾಶ್ ಅರೋರ್ ರವರು ಸಭಾಭವನವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರಲ್ಲದೆ  ಮುಂದಿನ ದಿನಗಳಲ್ಲಿ ಇದಕ್ಕೆ ತಾವುಕೂಡ ಸಂಪೂರ್ಣಸಹಕಾರ ನೀಡುವ ಭರವಸೆಯಿತ್ತರು.ಹಾಗೆಯೇ ಕುಟುಂಬದ ಇತರೆ ಸದಸ್ಯರನ್ನು ಈ ಸಭಾಭವನ ವೀಕ್ಷಿಸಲು ಕರೆದುಕೊಂಡು ಬರುವುದಾಗಿಯು ತಿಳಿಸಿದರು.ಈ ಸಂದರ್ಭದಲ್ಲಿ ಮಾಜಿ ಸಚಿವ     ಶ್ರೀ ಬಿ.ರಮನಾಥ ರೈ ಅವರಿಂದ ಸಭಾಭವನದ ಕುರಿತಾಗಿ ಮಾಹಿತಿಯನ್ನು  ಪಡೆದು ಕೊಂಡರು.ಜಿ‌.ಪಂ.ಸದಸ್ಯರಾದ ಪದ್ಮಶೇಖರ್ ಜೈನ್,ಚಂದ್ರಪ್ರಕಾಶ್ ಶೆಟ್ಟಿ ತುಂಬೆ,ತಾ.ಪಂ ಅದ್ಯಕ್ಷ ಚಂದ್ರಹಾಸ ಕರ್ಕೇರ,ಉಪಾದ್ಯಕ್ಷ ಅಬ್ಬಾಸ್ ಆಲಿ, ಬಂಟ್ವಾಳ ಹಾಗೂ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅದ್ಯಕ್ಷರುಗಳಾದ ಬೇಬಿ ಕುಂದರ್,ಸುದೀಪ್ ಕುಮಾರ್ ಶೆಟ್ಟಿ, ಪುರಸಭಾ ಸದಸ್ಯ ಜನಾರ್ದನ್ ಚಂಡ್ತಿಮಾರ್,ಮಾಜಿ ಸದಸ್ಯ ಜಗದೀಶ್ ಭಂಡಾರಿಬೆಟ್ಟು,ಎ.ಪಿ.ಎಂ.ಸಿ ಉಪಾದ್ಯಕ್ಷ ಚಂದ್ರಶೇಖರ್ ಪೂಜಾರಿ,ಡಾ.ವಸಂತ ಬಾಳಿಗ,ಅಮರನಾಥ ಬಾಳಿಗ,ಪ್ರವೀಣ್ ಕಿಣಿ ಮತ್ತಿತರಿದ್ದರು.

 

By suddi9

Leave a Reply

Your email address will not be published. Required fields are marked *