ಬಿ ಸಿ ರೋಡ್ ಸ್ಪರ್ಶ ಕಲಾಮಂದಿರದ ವಠಾರದಲ್ಲಿ ‘ತುಡರ್ ಯಕ್ಷಮಿತ್ರೆರ್ ‘ಬಿ ಸಿ ರೋಡ್ ಇವರ 7 ನೆ ವರ್ಷದ ಶ್ರೀ ಅನಂತಪದ್ಮನಾಭ ಯಕ್ಷಗಾನ ಮಂಡಳಿ ಪೆರಡೂರ್ ಇವರ ‘ಸೂರ್ಯಸಂಕ್ರಾಂತಿ’ ಎಂಬ ಯಕ್ಷಗಾನ ಬಯಲಾಟ ನಡೆಯಿತು. ಇದರ ಸಭಾಕಾರ್ಯಕ್ರಮವನ್ನು ಅತಿಥಿಗಳಾದ ಸುಭಾಶ್ಚಂದ್ರ ಜೈನ್ ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು.

a2b42175-f526-4cb0-a60f-4267bc05e983ಅಧ್ಯಕ್ಷ ತೆಯನ್ನು ಬಂಟ್ವಾಳ ತುಳುಕೂಟ ದ ಅಧ್ಯಕ್ಷರಾದ ಸುದರ್ಶನ್ ಜೈನ್ ವಹಿಸಿ ಕರಾವಳಿ ಗಂಡುಕಲೆ ಯಕ್ಷಗಾನ ಅದರದ್ದೇ ಆದ್ ವಿಶೇಷತೆ ಯನ್ನು ಹೊಂದಿದ್ದು, ಸಂಗೀತ, ನಾಟ್ಯ, ಮಾತುಗಾರಿಕೆ ಜೊತೆಯಲ್ಲಿ ಮೇಳೈಸಿದಾಗ ನೋಡುವ ಪ್ರೇಕ್ಷಕರ ಕಣ್ಣಿಗೆ ಹಬ್ಬವಾಗುತ್ತದೆ. ಇಂತಹ ಕಲೆಯನ್ನು ಉಳಿಸಿ ಬೆಳೆಸುವ ಸಲುವಾಗಿ ಹುಟ್ಟಿಕೊಂಡ ಸಂಸ್ಥೆ ನಿಜವಾಗಿಯೂ ಅಭಿನಂದನೀಯ ನಾವೆಲ್ಲರೂ ಇಂತಹ ಸಂಸ್ಥೆಗಳಿಗೆ ಪ್ರೋತ್ಸಾಹಿಸುವ ಮೂಲಕ ಯಕ್ಷಗಾನ ಕಲೆಯನ್ನು ಪ್ರದರ್ಶಿಸಲು ಸಹಕರಿಸೋಣ. ತುಡರ್ ಯಕ್ಷಮಿತ್ರೇರ್ ಇನ್ನಷ್ಟು ದಿನ ಕಲಾಸೇವೆಗೈಯಲಿ ಎಂದು ಶುಭ ಹಾರೈಸಿದರು. ಪ್ರತಿವರ್ಷದಂತೆ ಈ ವರ್ಷವೂ ಹಿರಿಯ ಯಕ್ಷಗಾನ ಹಾಸ್ಯ ಕಲಾವಿದರಾದ ಬಂಟ್ವಾಳ ಜಯರಾಮ ಆಚಾರ್ಯ ರನ್ನು ವೇದಿಕೆಯಲ್ಲಿ ಫಲ ಪುಷ್ಪ ತಾಂ ಬೂಲ ನೀಡಿ ಹಾರಹಾಕಿ ಪೇಟ ತೊಡಿಸಿ, ಗೌರವ ಸಂಭಾವನೆ ನೀಡಿ ಗೌರವಿಸಲಾಯಿತು. ವೇದಿಕೆಯಲ್ಲಿ ಅತಿಥಿಗಳಾಗಿ ಗಂಗಾಧರ ಶೇರಾ, ಸುಭಾಸಚಂದ್ರ ಜೈನ್, ಉಮೇಶ್ ರೆಂಜೋಡಿ ಸಮಯೋಚಿತವಾಗಿ ಮಾತನಾಡಿದರು. ಸಂಸ್ಥೆಯ ಅಧ್ಯಕ್ಷರಾದ ನಾರಾಯಣ್ ಸಿ ಪೆರ್ನೆ ಸ್ವಾಗತಿಸಿ ಗೌರವಾಧ್ಯಕ್ಷರಾದ ಶೇಷಪ್ಪ ಮಾಸ್ಟರ್ ಪ್ರಸ್ತಾಪಿಸಿದರು. ಕಾರ್ಯದರ್ಶಿ ನೇಸರ ವಳವೂರ್ ವಂದಿಸಿ ಕವಿತಾಯಾದವ್ ನಿರೂಪಿಸಿದರು. ಪಧಾಧಿಕಾರಿಗಳಾದ ಉಮೇಶ್ ಮೂಲ್ಯ, ತಿಮ್ಮಪ್ಪ, ಸದಾನಂದ ಶೆಟ್ಟಿ, ರಮೇಶ್, ದಿವಾಕರ ದಾಸ್, ತಿಲಕರಾಜ್ ಸಹಕರಿಸಿದರು.ನಂತರ ಮೇಳದವರಿಂದ ಯಕ್ಷಗಾನ ಬಯಲಾಟ ನಡೆಯಿತು.

By suddi9

Leave a Reply

Your email address will not be published. Required fields are marked *