ಕೈಕಂಬ:ವಿರಾಟ್ ಪ್ರೆಂಡ್ಸ್ ಪಲ್ಲಿಪಾಡಿ ಇವರ ಆಶ್ರಯದಲ್ಲಿ 2ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ವಿರಾಟ್ ಪ್ರೀಮಿಯರ್ ಲೀಗ್-2020 ಮಾ.1 ಮತ್ತು 2ರಂದು ಪೊಳಲಿಯಲ್ಲಿ ನಡೆಯಿತು.ಉದ್ಘಾಟನೆಯನ್ನು ಜಿಲ್ಲಾ ಪಂಚಾಯತ್ ಸದಸ್ಯ ಚಂದ್ರಪ್ರಕಾಶ್ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಯಶವಂತ ಪೂಜಾರಿ, ಉದ್ಯಮಿ ಉಮೇಶ್ ಆಚಾರ್ಯ, ಉದ್ಯಮಿ ರೋಶನ್ ಅಮೀನ್ ಪುಂಚಮೆ, ಉದ್ಯಮಿ ಚಂದ್ರಹಾಸ ಪಲ್ಲಿಪಾಡಿ, ಉದ್ಯಮಿ ಅಜಿತ್ ಪೊಳಲಿ ಲಕ್ಷ್ಮೀಶ್ ಶೆಟ್ಟಿ ಪಲ್ಲಿಪಾಡಿ ಉಪಸ್ಥಿತರಿದ್ದರು.ಭಾಗವಹಿಸಿದ ತಂಡಗಳಿಗೆ ಪ್ರಥಮ ಬಹುಮಾನ 30,000, ದ್ವಿತೀಯ ಬಹುಮಾನ-20,000 ಮತ್ತು ಇನ್ನಿತರ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.






