ಕೈಕಂಬ: ಒಡ್ಡೂರು ಧರ್ಮಚಾವಡಿಯಲ್ಲಿ ಶ್ರೀ ಕೊಡಮಣಿತ್ತಾಯ ಧರ್ಮ ದೈವ ಪ್ರತಿಷ್ಠೆ,ಚಂಡಿಕಾಯಾಗ ಮತ್ತು ಧರ್ಮನೇಮೋತ್ಸವ ನಡೆಯಲಿರುವ ಒಡ್ಡೂರು ಫಾರ್ಮ್ ಹೌಸ್ ಗೆ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಫೆ 26 ರಂದು ಬುಧವಾರ ಭೇಟಿ ನೀಡಿದರು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಶ್ರೀಮತಿ ಉಷಾ ಆರ್ ನಾಯ್ಕ್ ಸಚಿವರನ್ನು ಶಾಲು ಹೊದಿಸಿ ಸನ್ಮಾಣಿಸಿದರು. ಜಿಲ್ಲಾ ಕೇಂದ್ರ ಸಹಾರಿ ಬ್ಯಾಂಕಿನ ಅಧ್ಯಕ್ಷ ಎಂ.ಯನ್.ರಾಜೇಂದ್ರ ಕುಮಾರ್,ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ,ಆಲ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮೋಹನ್ ಆಳ್ವ. ಬಂಟ್ವಾಳ ಕ್ಷೇತ್ರ ಸಮಿತಿ ಅಧ್ಯಕ್ಷ ದೇವಪ್ಪ ಪೂಜಾರಿ , ನಿಕಟ ಪೂರ್ವ ಅಧ್ಯಕ್ಷ ದೇವ್‍ದಾಸ್ ಶೆಟ್ಟಿ , ಮಂಗಳೂರು ಕ್ಷೇತ್ರ ಸಮಿತಿ ಅದ್ಯಕ್ಷ ಚಂದ್ರಹಾಶ ಪಂಡಿತ್ ಹೌಸ್ ಉಪಸ್ಥಿತರಿದ್ದರು.
ಈಸಂದರ್ಭದಲ್ಲಿ ತಮ್ಮನ್ನು ಭೇಟಿಯಾದ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವರು ಬರಡು ಭೂಮಿಯನ್ನು ಸಾವಯವಕೃಷಿಭೂಮಿಯನ್ನಾಗಿಸಿರುವ ರಾಜೇಶ್ ನಾಯ್ಕ್ ಅವರ ಸಾಧನೆ ಅದ್ಬುತವಾಗಿದೆ.ರಾಜಕೀಯ ಕ್ಷೇತ್ರಕ್ಕೆ ಬಂದು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದನ್ನು ಸಾಕಷ್ಟು ಮಂದಿಯನ್ನು ಕಂಡಿದ್ದೆನೆ ಆದರೆ,ಇವರು ರಾಜಕೀಯ ಕ್ಷೇತ್ರಕ್ಕೆ ಬರುವ ಮುನ್ನವೇ ಮೂವತ್ತು ವರ್ಷಗಳಿಂದ ಕೃಷಿಯಲ್ಲಿ ತೊಡಗಿಸಿಕೊಂಡು ಮಾಡಿರುವ ಸಾಧನೆ ತನಗೆ ಸಂತಸ ತಂದಿದೆ ಎಂದರು. ಇಂತಹ ಪ್ರಶಾಂತ ವಾತಾವರಣದ ಕೃಷಿಭೂಮಿಯಲ್ಲಿ ನಡೆಯುವ ಶತಚಂಡಿಕಾಯಾಗದಿಂದ ರಾಜ್ಯದ,ಜಿಲ್ಲೆಯ ಜನತೆಗೆ ಸಮೃದ್ದಿ,ನೆಮ್ಮದಿಯನ್ನು ತರಲಿ ಎಂದು ಹಾರೈಸಿದರು.
ಪ್ರಮುಖರಾದ ರವೀಂದ್ರ ಕಂಬಳಿ, ಸಂತೋಷ್ ಕೂಮಾರ್ ಬೋಳಿಯಾರ್, ಪ್ರಭಾಕರ್ ಪ್ರಭು, ಸಂದೇಶ್ ಶೆಟ್ಟಿ, ರಂಜಿತ್ ಮೈರ ,ರಮಾನಾಥ ರಾಯಿ,ಗಣೇಶ್ ರೈ ಮಾಣಿ, ಪುರುಷೋತ್ತಮ ಶೆಟ್ಟಿ ವಾಮದಪದವು ಸೀತಾರಾಮ ಪೂಜಾರಿ, ರೋನಾಲ್ಡ್ ಡಿ ಸೋಜ, , ಡೋಂಬಯ್ಯ ಅರಳ, ಕೃಷ್ಣರಾಜ ಮಾರ್ಲಾ , ನಂದರಾಮ ರೈ,ಮುರಳಿಧರ್ ಶೆಟ್ಟಿ, ವಿನೋದ್ ಮಾಡ,ಭುವನೇಶ್ ಪಚಿನಡ್ಕ, ಚಂದ್ರಹಾಶ ಶೆಟ್ಟಿ ನಾರಳ, ವೆಂಕಟೇಶ್ ನಾವಡ, ಪವನ್ ಕುಮಾರ್ ಶೆಟ್ಟಿ, ವಿದ್ಯಾಚರಣ್ ಶೆಟ್ಟಿ, ಸುಧೀರ್, ಹರೀಶ್ ಏತ ಮುಗರಿಗುತು ಮೊದಲಾದವರು ಉಪಸ್ಥಿತರಿದ್ದರು.





