ಕೈಕಂಬ:ಶ್ರೀ ಸೀತಾರಾಮ ಭಜನಾ ಮಂದಿರ(ರಿ)ನಾರಳ 61ನೇ ವರ್ಷದ ವಾರ್ಷಿಕ ಮಂಗಲೋತ್ಸವ ಸಹಿತ ಮೂರು ದಿನಗಳ ಅಖಂಡ ಭಜನಾ ಮಂಗಲೋತ್ಸವವು ಫೆ.19ರ ಸೂರ್ಯೋದಯದಿಂದ ಮೊದಲ್ಗೊಂಡು ಫೆ.22ರ ಶನಿವಾರದವರೆಗೆ ನಡೆಯಲಿದೆ.
ಫೆ.18ಮಂಗಳವಾರ 6ರಿಂದ ನಾರಳ ಶ್ರೀಪತಿ ಆಚಾರ್ಯ ಇವರ ನೇತೃತ್ವದಲ್ಲಿ ಪ್ರಾರ್ಥನೆ, ವಾಸ್ತುಪೂಜೆ ಮತ್ತು ಶ್ರೀ ಸುದರ್ಶನ ಹೋಮ,ಫೆ.19 ಬುಧವಾರ ಬೆಳಿಗ್ಗೆ 5ರಿಂದ ಗಣಯಾಗ , ಮಹಾಪೂಜೆ, 6.52ರ ಸುರ್ಯೋದಯಕ್ಕೆ ಮೂರು ದಿನಗಳ ಅಖಂಡ ಭಜನಾ ಮಂಗಲೋತ್ಸವ ಪ್ರಾರಂಭ.ದೀಪ ಪ್ರಜ್ವಲನೆ ಪ್ರಧಾನ ಅರ್ಚಕರು ಶ್ರೀ ಮಹಾಗಣಪತಿ ದೇವಸ್ಥಾನ ಗಂಜಿಮಠ, ಮಾಧವ ಭಟ್ ಪವಿತ್ರಪಾಣಿ ಹಾಗೂ ಪ್ರಧಾನ ಅರ್ಚಕರು ಶ್ರೀ ರಾಜರಾಜೇಶ್ವರೀ ಪೊಳಲಿ ಶ್ರೀ ಗಣೇಶ್ ಭಟ್, ದೀಪ ಪ್ರಜ್ವಲಿಸಲಿದ್ದಾರೆ.
