ಬಂಟ್ಚಾಳ: ಬಂಟ್ವಾಳ ಉಪವಿಭಾಗ ವ್ಯಾಪ್ತಿಯ ಕುಕ್ಕಿಪಾಡಿ ಉಪಕೇಂದ್ರದಿಂದ ಹೊರಡುವ ಎಲ್ಲಾ ೧೧ ಕೆವಿ ಫೀಡರ್ ಗಳ ನಿರ್ವಹಣಾ ಕಾಮಗಾರಿಯನ್ನು ತಾಂತ್ರಿಕ ಕಾರಣಗಳಿಂದ ಗುರುವಾರದಿಂದ ಮಂಗಳವಾರಕ್ಕೆ ಬದಲಾಯಿಸಲಾಗಿದೆ ಎಂದು‌ ಬಂಟ್ವಾಳ ಮೆಸ್ಕಾಂನ ಕಾರ್ಯ ನಿರ್ವಾಹಕ ಇಂಜಿನಿಯರ್ ಅವರ ಪ್ರಕಟಣೆ ತಿಳಿಸಿದೆ. ಹಾಗಾಗಿ ಸಂಗಬೆಟ್ಟು,ಕುಕ್ಕಿಪಾಡಿ,ಸಿದ್ದಕಟ್ಟೆ,ವಾಮದಪದವು,ಪಂಜಿಕಲ್ಲು,ಕರ್ಪೆ, ಅರಳ,ರಾಯಿ,ಕೊಯಿಲ,ಎಲಿಯನಡುಗೋಡು,ಅಜ್ಜೆಬೆಟ್ಟು,ಚೆನ್ನೈತ್ತೋಡಿ,ಪಿಲಿಮೊಗ್ರು, ಬುಡೋಳಿ ಸುತ್ತಮುತ್ತಲಿನ ಪ್ರದೇಶದಲ್ಲಿ ಇನ್ನುಮುಂದೆ ಪ್ರತಿ ಮಂಗಳವಾರ ವಿದ್ಯುತ್ ವ್ಯತ್ಯಯ ಉಂಟಾಗುತ್ತದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

By Suddi9

Leave a Reply

Your email address will not be published. Required fields are marked *