ಬಂಟ್ವಾಳ: ಸ್ನೇಹಿತರ ಜೊತೆ ದೇವರ ಕೆರೆಗೆ ಇಳಿದ ಯುವಕನೋರ್ವ ಅಕಸ್ಮಾತ್ತಾಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಕಾರಿಂಜದಲ್ಲಿ ನಡೆದಿದೆ.ಸಿದ್ದಕಟ್ಟೆ ಸಮೀಪದ ವಕ್ಕಾಡಿಗೋಳಿ ನಿವಾಸಿ ಸೇಸಪ್ಪ ಮಡಿವಾಳ ಎಂಬವರ ಮಗ ಸುಕೇಶ್ (26) ನೀರಿಗೆ ಬಿದ್ದು ಮೃತನಾದ ಯುವಕ.ಸುಕೇಶ್ ಮಂಗಳೂರು ಹೊಟೇಲ್ ನಲ್ಲಿ ಕೆಲಸ ಮಾಡುತ್ತಿದ್ದು,
IMG-20200209-WA0065ಆದಿತ್ಯವಾರ ರಜಾ ದಿನವಾದ್ದರಿಂದ ತನ್ನ ಇಬ್ಬರು ಸ್ನೇಹಿತ ರ ಜೊತೆ ಕಾರಿಂಜಕ್ಕೆ ಬಂದಿದ್ದರು.ಸಂಜೆಯ ವೇಳೆ ಕಾರಿಂಜದ ದೇವರ ಕೆರೆಗೆ ಸ್ನಾನ ಮಾಡಲು ಎಂದು ಮೂವರು ಇಳಿದಿದ್ದಾರೆ.ಅದರೆ ಅಕಸ್ಮಾತ್ತಾಗಿ ಸುಕೇಶ್ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ ಎಂದು ಹೇಳಲಾಗಿದೆ.
ಅಗ್ನಿಶಾಮಕ ದಳದವರು ಅಗಮಿಸಿ ಕೆಲವು ಗಂಟೆಗಳ ಕಾಲ ಹುಡುಕಾಡಿದ ಬಳಿಕ ಮೃತದೇಹ ಪತ್ತೆಯಾಗಿದೆ.ಘಟನಾ ಸ್ಥಳಕ್ಕೆ ಪುಂಜಾಲಕಟ್ಟೆ ಪೊಲೀಸ್ ಠಾಣಾ ಎಸ್. ಐ.ಸೌಮ್ಯ ಹಾಗೂ ಸಿಬ್ಬಂದಿ ಗಳು ಬೇಟಿ ನೀಡಿ ಪರಿಶೀಲಿಸಿದ್ದಾರೆ.

By Suddi9

Leave a Reply

Your email address will not be published. Required fields are marked *